ಸಂಶೋಧನೆ ದೃಷ್ಟಿಕೋನ ಬೆಳೆಸಿಕೊಳ್ಳಲಿ

12npn3
Published on

ನಿಪ್ಪಾಣಿ: ಆಧುನಿಕ ಶಿಕ್ಷಣದಲ್ಲಿ ಸಂಶೋಧನೆ ಅವಶ್ಯಕ ಮತ್ತು ನಾವೀನ್ಯತೆಯ ಮೂಲಕ ವಿದ್ಯಾರ್ಥಿಗಳ ರಚನೆಯನ್ನು ಸಂಶೋಧನೆಯ ಮೂಲಕ ಪರಿಶೀಲಿಸಬಹುದಾದ ಶಿಕ್ಷಣವನ್ನು ಪ್ರತಿಯೊಬ್ಬರೂ ಪಡೆಯುವುದು ಅವಶ್ಯಕ ಎಂದು ಖಾನಾಪುರದ ಸರ್ಕಾರಿ ಪದವಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ವಿದ್ಯಾ ಜೀರಗೆ ಹೇಳಿದರು.

ಪಟ್ಟಣದ ಕೆಎಲ್‌ಇ ಸಂಸ್ಥೆಯ ಜಿ.ಐ.ಬಾಗೇವಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಶುಕ್ರವಾರ ವಾಣಿಜ್ಯ ವಿಭಾಗದಿಂದ ಹಮ್ಮಿಕೊಂಡಿದ್ದ ಯೋಜನೆಯ ತಯಾರಿ ಮತ್ತು ವರದಿ ಬರವಣಿಗೆ ವಿಷಯದ ಕುರಿತು ಒಂದು ದಿನದ ಅಂತರ ಕಾಲೇಜು ಕಾರ್ಯಾಗಾರದಲ್ಲಿ ಮಾತನಾಡಿದರು.

ಪ್ರಾಚಾರ್ಯ ಡಾ.ಮಹಾಂತೇಶ ಹುರಳಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಡಾ.ಅತುಲಕುಮಾರ ಕಾಂಬಳೆ, ಪ್ರಿಯಾಂಕ ಕಮತೆ, ಸುಪರ್ಣಾ ದೇಶಪಾಂಡೆ, ಸ್ನೇಹಲ ಹಿರೇಕುಡಿ, ಪ್ರೋ.ಸುಧೀರ ಕೋಠಿವಾಲೆ, ಡಾ.ಬಸವರಾಜ ಜನಗೌಡ ಇತರರಿದ್ದರು. ಪೂಜಾ ಬನ್ನೂರು ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವೈಭವ ದಪ್ತದಾರ ಸ್ವಾಗತಿಸಿದರು. ಕಾರ್ತಿಕಾ ಪಾಟೀಲ ಸ್ವಾಗತಿಸಿದರು. ಆದಿತ್ಯ ನಾಯಕ ನಿರೂಪಿಸಿದರು. ಗಾಯತ್ರಿ ಹುಲಮುದ್ದೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net