ಸಂಶೋಧನೆ ಗುಣಮಟ್ಟ ಕಾಪಾಡಿ

12 vikram 1
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಂಶೋಧನಾ ವಿಧಾನದಲ್ಲಿ ಸಾರ್ವಜನಿಕರ ನಂಬಿಕೆ ಬಹಳ ಮುಖ್ಯ. ನಂಬಿಕೆ ಎಂಬುವುದು ಸಮಾಜದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಕರ್ನಾಟಕ ವಿಶ್ವ ವಿದ್ಯಾಲಯ ಸಮಾಜ ವಿಜ್ಞಾನ ವಿಭಾಗದ ಡೀನ ಪ್ರೊ. ಜಯಶ್ರೀ ಎಸ್. ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ಕಲಾ ಕಾಲೇಜಿನ ಐಕ್ಯೂಎಸಿ ರಾಜ್ಯಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತ ವಿಭಾಗದ ವತಿಯಿಂದ ಪ್ರವಾಸೋದ್ಯಮ ವಿಭಾಗದ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಂಶೋಧನಾ ವಿಧಾನದ ಕುರಿತು ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಒಳ್ಳೆ ಸಂಶೋಧನೆಯು ಪ್ರಸ್ತುತ ವಿದ್ಯಮಾನಗಳನ್ನು ಹೊಂದಿರುತ್ತದೆ. ಸಂಶೋಧನಾ ವಿಧಾನ ಸ್ಪಷ್ಟವಾಗಿ, ತಾರ್ಕಿಕ, ಸಂಕ್ಷಿಪ್ತವಾಗಿರಬೇಕು. ಸಂಶೋಧನೆಯು ಹೊಸ ಜ್ಞಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂಶೋಧನಾ ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಸಂಶೋಧನಾ ವಿಧಾನದಲ್ಲಿ ಭಾಗಿಯಾಗಬೇಕು. ಸಂಶೋಧನೆಯು ಸಾಮಾಜಿಗಳ ಮಧ್ಯೆ ಇರುವ ಸಮಸ್ಯೆಗಳನ್ನು ಬಗೆಹರಿಸಲು ಸಂಶೋಧನೆಗಳು ಸಮಾಜದಲ್ಲಿ ಒಳ್ಳೆ ಪಾತ್ರ ವಹಿಸುತ್ತದೆ ಎಂದರು.
ಕವಿವಿ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಎಂ.ಜಿ. ಖಾನ್ ಮಾತನಾಡಿ, ಪ್ರಸ್ತುತ ಸಂಶೋಧನೆಯ ಗುಣಮಟ್ಟ ಕಾಪಾಡಿಕೊಳ್ಳಬೇಕು. ವಿಷಯದ ಮೇಲೆ ಕೇಂದ್ರೀಕರಿಸಬೇಕು ಎಂದ ಅವರು, ಪ್ರಸ್ತುತ ವಿದ್ಯಮಾನಗಳು ಕುರಿತಾಗಿ ಸಂಶೋಧನಾ ವಿಷಯ ಆಯ್ಕೆ ಮಾಡಿಕೊಳ್ಳಬೇಕು. ಸಂಶೋಧನೆ ವಿಶೇಷವಾದ ಜ್ಞಾನ ಹೊಂದಿರಬೇಕು ಎಂದರು.
ಕರ್ನಾಟಕ ಕಲಾ ಕಾಲೇಜಿನ ಐಕ್ಯೂಎಸಿ ಸಂಯೋಜಕ ಡಾ. ಐ.ಸಿ. ಮುಳಗುಂದ ಸಂಶೋಧನಾ ಲೇಖನ ಬರೆಯುವ ಕೌಶಲ್ಯ ಕುರಿತು ಮಾತನಾಡಿದರು. ಕೆಎಲ್‌ಇ ಉನ್ನತ ಶಿಕ್ಷಣ ಸಂಶೋಧನಾ ಕೇಂದ್ರದ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ ಡಾ. ಎಸ್.ಬಿ. ಜವಳಿ, ಕರ್ನಾಟಕ ಕಲಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಸುರೇಶ ಹುಲ್ಲಣ್ಣವರ, ಡಾ. ಎಂ.ಬಿ. ದಳಪತಿ, ಮಾನವಶಾಸ್ತ್ರ ವಿಭಾಗದ ಪ್ರೊ.ಜಗದೀಶ ಅವರು ಸಂಶೋಧನೆಯ ವಿವಿಧ ಆಯಾಮಗಳ ಕುರಿತು ಮಾತನಾಡಿದರು.
ಡಾ.ವಿ.ಪಿ.ಸುಣಗಾರ, ಡಾ.ಎಸ್.ಎಸ್.ಶ್ರೀಗಿರಿ, ಡಾ. ಮಹಾದೇವ ಬಿಡ್ನಾಳ, ಡಾ.ಎನ್.ಎಸ್. ಬಂಡಿ, ಡಾ. ಮಲ್ಲವ್ವ ಮಾದರ, ಪ್ರೊ. ಸುಕನ್ಯಾ ಕಲ್ಲೂರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net