ಸಂವಿಧಾನದಲ್ಲಿ ವಚನದ ಮೌಲ್ಯವಿದೆ

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ ‘ವಚನಗಳು ಮತ್ತು ಭಾರತದ ಸಂವಿಧಾನ’ ಸಂವಾದ ಕಾರ್ಯಕ್ರಮದಲ್ಲಿ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಅವರನ್ನು ಸನ್ಮಾನಿಸಲಾಯಿತು. ಬಸವ ಶ್ರೀಪ್ರಭು ಸ್ವಾಮೀಜಿ, ವೆಂಕಟರಾಜು, ಶಶಿಕುಮಾರ್, ಆರ್.ಕೆ.ಮಧು, ಮಹದೇವಪ್ರಸಾದ್, ನಂಜುಂಡಸ್ವಾಮಿ ಇದ್ದರು.
06-GPT-3
Published on

ಗುಂಡ್ಲುಪೇಟೆ: ನಮ್ಮ ಸಂವಿಧಾನದಲ್ಲಿ ಶರಣರ ಕಾಲದ ವಚನದ ಮೌಲ್ಯವಿದೆ ಎಂದು ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಅಭಿಪ್ರಾಯಪಟ್ಟರು.


ತೆರಕಣಾಂಬಿ ಗ್ರಾಮದ ಮುರಾರ್ಜಿ ವಸತಿ ಶಾಲೆಯಲ್ಲಿ ಜೆ.ಎಸ್.ಬಿ. ಪ್ರತಿಷ್ಠಾನ ಮಂಗಳವಾರ ಆಯೋಜಿಸಿದ್ದ ‘ವಚನಗಳು ಮತ್ತು ಭಾರತದ ಸಂವಿಧಾನ’ ಎಂಬ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಶರಣರ ವಚನಗಳಿಗೂ ಭಾರತದ ಸಂವಿಧಾನಕ್ಕೂ ಸಾಮ್ಯತೆ ಇದೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ಹೇಳಿದ ಸಂದೇಶಗಳನ್ನೇ ಸಂವಿಧಾನದ ರೂಪದಲ್ಲಿ ಜಾರಿಗೆ ತರಲಾಗಿದೆ ಎಂದರು.
ಅಂದಿನ ಅನುಭವ ಮಂಟಪದಲ್ಲಿ ವಚನಗಳನ್ನು ಅರ್ಥೈಸಿ ಚರ್ಚಿಸಿ ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಗುತ್ತಿತ್ತು. ಪ್ರಸ್ತುತ ಪಾರ್ಲಿಮೆಂಟಿನಲ್ಲೂ ಇದೇ ವ್ಯವಸ್ಥೆ ಇದೆ ಎಂದರು.
ಬಸವ ಶ್ರೀ ಪ್ರಭು ಸ್ವಾಮೀಜಿ, ರಂಗಕರ್ಮಿ ವೆಂಕಟರಾಜು, ಪ್ರತಿಷ್ಠಾನದ ಮುಖ್ಯಸ್ಥ ಶಶಿಕುಮಾರ್, ವನ್ಯಜೀವಿ ಛಾಯಾಗ್ರಾಹಕ ಮಧು, ಪ್ರಾಂಶುಪಾಲ ಮಹದೇವಪ್ರಸಾದ್, ಶಿಕ್ಷಕರಾದ ನಂಜುಂಡಸ್ವಾಮಿ, ಸವಿತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net