ಸಂವಿಧಾನದ ಪಾಲನೆ ಮಾಡುವುದೇ ಸ್ವಾತಂತ್ರ್ಯ: ಪೇಜಾವರಶ್ರೀ

23
Published on

ಮೈಸೂರು: ವಿಜಯ ವಿಠ್ಠಲ ವಿದ್ಯಾಶಾಲೆಯಲ್ಲಿ ಸ್ವಾತಂತ್ರ್ಯ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮಕ್ಕಳ ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರ ಗಮನ ಸೆಳೆಯಿತು.


ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮಾತನಾಡಿ, ನಾವೇ ರೂಪಿಸಿಕೊಂಡಿರುವ ಸಂವಿಧಾನದ ಕಟ್ಟುಪಾಡುಗಳನ್ನು ಸೂಕ್ತ ರೀತಿಯಲ್ಲಿ ಪಾಲನೆ ಮಾಡುವುದೇ ಸ್ವಾತಂತ್ರ್ಯ. ಬದುಕಿನ ಉದ್ದಕ್ಕೂ ಶಿಸ್ತು ಎಂಬುದು ಮುಖ್ಯ. ಸಮಾಜದಲ್ಲಿ ನಮ್ಮ ಸುಖ, ಸಂತೋಷಕ್ಕೆ ಮಾತ್ರ ಬದುಕಬಾರದು. ನಮ್ಮ ಅಕ್ಕಪಕ್ಕದವರಿಗೂ ಸಂತೋಷ ನೀಡಿದರೆ ಸಮಾಜ ಸುಂದರವಾಗಿರುತ್ತದೆ ಎಂದು ಮಕ್ಕಳಿಗೆ ತಿಳಿಸಿದರು.

ಎನ್‌ಐಇ ನಿವೃತ್ತ ಪ್ರಾಧ್ಯಾಪಕ ಕೆ.ಎಸ್.ಚಂದ್ರಶೇಖರ್ ಮಾತನಾಡಿ, ಸೈನಿಕರ ತ್ಯಾಗ, ಬಲಿದಾನದಿಂದ ನಮ್ಮ ದೇಶ ಬ್ರಿಟೀಷರ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯವಾಗಿದೆ ಎಂದರು.

ವಿಜಯ ವಿಠಲ ಟ್ರಸ್ಟಿ ಎ.ವಿಶ್ವನಾಥ್, ಕಾರ್ಯದರ್ಶಿ ವಾಸುದೇವ್ ಭಟ್, ಪ್ರಾಂಶುಪಾಲೆ ಎಸ್.ಎ.ವೀಣಾ ಸೇರಿದಂತೆ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net