ಸಂವಿಧಾನದ ಚೌಕಟ್ಟಿನಲ್ಲಿ ಜೀವನ ಸಾಗಿಸಿ

oppo_0
oppo_0
Published on

ಗೊರೇಬಾಳ: ಡಾ.ಬಿ.ಆರ್.ಅಂಬೇಡ್ಕರ್ ಶೋಷಿತ ಸಮುದಾಯ ಹಾಗೂ ದಲಿತರ ಪೋಷಣೆಯ ಬೆಳಕಾಗಿದ್ದಾರೆ ಎಂದು ಒಳಮೀಸಲಾತಿ ಐಕ್ಯ ಹೋರಾಟ ಸಮಿತಿ ಸಂಚಾಲಕ ಅಂಬಣ್ಣ ಅರೋಲಿಕರ್ ಹೇಳಿದರು.

ಹಂಚಿನಾಳ ಕ್ಯಾಂಪ್‌ನಲ್ಲಿ ದಲಿತ ಸಂಘರ್ಷ ಸಮಿತಿಯಿಂದ ಆಯೋಜಿಸಿದ್ದ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ಅಂಬೇಡ್ಕರ್ ಅವರನ್ನು ನಿತ್ಯ ಸ್ಮರಿಸುತ್ತಾ ಅವರ ಆದರ್ಶ ಗುಣಗಳನ್ನು ಪಾಲಿಸುವ ಮೂಲಕ ಸಂವಿಧಾನದ ಚೌಕಟ್ಟಿನಲ್ಲಿ ಜೀವನ ಸಾಗಿಸಬೇಕೆಂದರು. ನನ್ನ ಪ್ರತಿಮೆ ಪೂಜೆ ಮಾಡದೆ ನಾನು ಕಂಡ ಕನಸನ್ನು ಸಾಕಾರ ಮಾಡಿದಾಗ ಅದೇ ಸಮಾನತೆಯ ಪೂಜೆ ಆಗಲಿದೆ ಎಂದು ಅಂಬೇಡ್ಕರ್ ತಿಳಿಸಿದ್ದಾರೆ ಎಂದರು.

ಕರ್ನಾಟಕ ರೈತಸಂಘದ ಅಧ್ಯಕ್ಷ ಡಿ.ಎಚ್.ಪೂಜಾರ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನ ಭಾರತೀಯ ಸಂಸ್ಕೃತಿಯ ಪಾಲನೆಯೊಂದಿಗೆ ಸಹಬಾಳ್ವೆ ಸಮಾನತೆಯ ಧ್ಯೋತಕವಾಗಿದೆ ಎಂದು ಹೇಳಿದರು. ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಮನಗೌಡ ಮಾತನಾಡಿ, ಶೋಷಿತರು ಶೈಕ್ಷಣಿಕವಾಗಿ ಉನ್ನತ ಸಾಧನೆ ಮಾಡಬೇಕು ಎಂದರು.

ಆರ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವೈ.ಅನಿಲ್ ಕುಮಾರ, ಗೊರೇಬಾಳ ಗ್ರಾಪಂ ಅಧ್ಯಕ್ಷೆ ಎಚ್.ಕೆ.ಬಸಮ್ಮ, ಮಾಜಿ ಅಧ್ಯಕ್ಷ ದುರ್ಗಾಪ್ರಸಾದ, ಪ್ರಮುಖರಾದ ಅಜಯ ನಾಡಗೌಡ, ಲಿಂಗರಾಜ ಸಾಹುಕಾರ ಹಂಚಿನಾಳ , ಶಂಭಣ್ಣ ಸಾಹುಕಾರ, ಎಚ್.ಎನ್.ಬಡಿಗೇರ, ಜಾಲಿಹಾಳ ಗ್ರಾಪಂ ಅಧ್ಯಕ್ಷ ಮರಿಯಪ್ಪ, ಸದಸ್ಯರಾದ ನಾಗಮ್ಮ ಆನಂದ, ಸುಬ್ಬರಾವ್, ಎಂ.ಲಕ್ಷ್ಮಣರಾವ್, ಅಲ್ಲಮಪ್ರಭು, ಅಂಬ್ರೂಸ್, ರಾಮಣ್ಣ ಸಾಸಲಮರಿ, ಸಿದ್ದು ಹೂಗಾರ, ಮೌನೇಶ್, ವಿರುಪಣ್ಣ ನಂದವಾಡ್ಗಿ, ದುರ್ಗಾಪ್ರಸಾದ್, ಅಮರೇಶ ಗಿರಿಜಾಲಿ, ಹುಸೇನಪ್ಪ, ಫಕೀರಪ್ಪ, ವೆಂಕಟೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net