

ಚಿತ್ರದುರ್ಗ: ಸಂಶೋಧನೆಗಳ ಮೂಲಕ ದೇಸಿ ತಂತ್ರಜ್ಞಾನಗಳನ್ನು ನಾವಿನ್ಯಗೊಳಿಸಬೇಕಿದೆ ಎಂದು ಸಾಹಿತಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಹೇಳಿ ದರು.
ಚಿತ್ರದುರ್ಗ ಸೈನ್ಸ್ ಫೌಂಡೇಷನ್,ರಾಜ್ಯವಿಜ್ಞಾನ ಪರಿಷತ್‌ನಿಂದ ನಗರದ ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯಲ್ಲಿ ವಿಕಸಿತ ಭಾರತಕ್ಕಾಗಿ ದೇಸಿ ತಂತ್ರಜ್ಞಾನ ಕುರಿತು ಅವರು ಮಾತನಾಡಿದರು. ಮತ ಧ ರ್ಮಗಳ ನಡುವಿರುವ ಬೇಲಿ,ಬಡತನ,ನಿರುದ್ಯೋಗ,ಪರಿಸರ ಮಾಲಿನ್ಯ,ಮೌಢ್ಯ ಮತ್ತು ಭ್ರಷ್ಟಾಚಾರ ವಿಕಸಿತ ಭಾರತಕ್ಕೆ ಅಡ್ಡಿಯಾಗಿದೆ. ಸಂವಿಧಾನದ ಆಶಯಗಳು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿವೆವೆಂದರು.
ಚಿತ್ರದುರ್ಗ ಸೈನ್ಸ್ ಫೌಂಡೇಷನ್ ನಿರ್ದೇಶಕ ಪ್ರೊ.ಇ.ರುದ್ರಮುನಿ ಮಾತನಾಡಿ ಶಿಕ್ಷಕರ ಕರ್ತವ್ಯದಲ್ಲಿ ಎಂದಿಗೂ ಕರ್ತವ್ಯ ನಿಷ್ಠೆ,ಪ್ರಾ ಮಾಣಿಕತೆ ಕೊರತೆ ಕಾಣಿಸಿಕೊಳ್ಳಬಾರದು. ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಹೊಣೆ ಶಿಕ್ಷಕರ ಮೇಲಿದೆ ಎಂದರು.
ಶಿಕ್ಷಕರ ಸರ್ಕಾರಿ ಶಿಕ್ಷಣಮಹಾವಿದ್ಯಾಲಯದ ಪ್ರವಾಚಕಿ ಸುಜಾತ ಅಧ್ಯಕ್ಷತೆ ವಹಿಸಿದ್ದರು. ಫೌಂಡೇಷನ್ ಕಾರ್ಯದರ್ಶಿ ಎಚ್ ಎಸ್ ಟಿ ಸ್ವಾಮಿ,ಪ್ರವಾಚಕ ಜಿ.ಆರ್.ತಿಪ್ಪೇಶಪ್ಪ,ರಾಜಣ್ಣ ಇದ್ದರು. ಪ್ರಶಿಕ್ಷಣಾರ್ಥಿ ಹೇಮಲತಾ ಪ್ರಾರ್ಥಿಸಿದರು. ಗೌತಮಿ ಸ್ವಾಗತಿಸಿ,ಭಾರತಿ ನಿರೂಪಿಸಿದರು.