

ಸಿಂದಗಿ: ವಿಶ್ವದಲ್ಲಿ ನಮ್ಮ ದೇಶದ ಪ್ರಜಾಪ್ರಭುತ್ವ ಹಿರಿದು ಎಂಬ ಮಾತಿದೆ. ಆದರೆ ಸಂವಿಧಾನದ ಉಲ್ಲೇಖಗಳ ಆಶಯ ಇಂದಿಗೂ ಜನಸಾಮಾನ್ಯರನ್ನು ತಲುಪದೇ ಇರುವುದು ಕಳವಳದ ಸಂಗತಿ ಎಂದು ಉಪನ್ಯಾಸಕ ಆರ್.ಎನ್. ಗಾಯಕವಾಡ ಹೇಳಿದರು.
ಶುಕ್ರವಾರ ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತ, ತಾಪಂ ಹಾಗೂ ಸಮಾಜಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ನಿಮಿತ್ತ ಸಂವಿಧಾನ ಓದು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಸಂವಿಧಾನ ಓದು ಎಂಬ ಹೊಸ ಅಭಿಯಾನ ಸಂವಿಧಾನದ ಪೂರ್ವ ಪೀಠಿಕೆಯನ್ನು ಯುವ ಪೀಳಿಗೆಗೆ ಗೊತ್ತು ಮಾಡುವ ಮೂಲಕ ಸಂವಿಧಾನದ ರಚನಾ ಕಾರ್ಯದ ಅರಿವು ಮೂಡಿಸಲಾಗುತ್ತಿರುವುದು ಔಚಿತ್ಯದ ಕಾರ್ಯ. ಸಾರ್ವಭೌಮ, ಸಮಾನತೆಯ ಬಹುತೇಕ ಆಶಯಗಳನ್ನು ಸಂವಿಧಾನದಲ್ಲಿವೆ. ಭಾರತ ಜಾತ್ಯಾತೀತ ರಾಷ್ಟ್ರವಾಗುವಲ್ಲಿ ಸಂವಿಧಾನದ ಪಾತ್ರ ಮುಖ್ಯವಾಗಿದೆ ಎಂದರು.
ತಹಸೀಲ್ದಾರ್ ಡಾ. ಪ್ರದೀಪಕುಮಾರ ಹಿರೇಮಠ ಅವರು ಸಂವಿಧಾನದ ಪ್ರತಿಜ್ಞಾವಿಧಿ ಬೋಧಿಸಿದರು.
ತಾಪಂ ಅಧಿಕಾರಿ ಬಾಬು ರಾಠೋಡ, ಸಮಾಜಕಲ್ಯಾಣಾಧಿಕಾರಿ ಎನ್.ಎಸ್. ಭೂಸಗೊಂಡ, ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ಸಿಪಿಐ ಡಿ. ಹುಲಗಪ್ಪ, ಪುರಸಭೆ ಸದಸ್ಯ ಹಾಸಿಂಪೀರ ಆಳಂದ, ಚಂದ್ರಕಾಂತ ಸಿಂಗೆ, ಪರಶುರಾಮ ಕಾಂಬಳೆ, ಶ್ರೀಶೈಲ ಜಾಲವಾದಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಶಾಲಾ, ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು, ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.