ಸಂವಿಧಾನ ಸಾಂಸ್ಕೃತಿಕ ಪಠ್ಯವಾಗಿ ಅರಿಯಬೇಕು

bkt-23-1
ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕನ ಸಭಾಂಗಣದಲ್ಲಿ ಭಾನುವಾರ ಯಂಡಿಗೇರಿಯ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ೨೦೨೪ ರ ರಾಜ್ಯ ಮಟ್ಟದ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Published on

ಬಾಗಲಕೋಟೆ: ಸಾಹಿತಿಗಳು ಪರಾವಲಂಬಿಗಳಾಗಬಾರದು, ಸಂವಿಧಾನವನ್ನು ರಾಜಕೀಯ ಪಠ್ಯವಾಗಿ ನೋಡದೆ ಸಾಂಸ್ಕೃತಿಕ ಪಠ್ಯವಾಗಿ ಅರಿಯಬೇಕಾಗಿದೆ ಎಂದು ಖ್ಯಾತ ಕಾದಂಬರಿಕಾರ ಶ್ರೀಧರ ಬಳಿಗಾರ ಹೇಳಿದರು.

ನವನಗರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕನ ಸಭಾಂಗಣದಲ್ಲಿ ಭಾನುವಾರ ಯಂಡಿಗೇರಿಯ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ೨೦೨೪ ರ ರಾಜ್ಯ ಮಟ್ಟದ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಹುಮಾನ ಪ್ರಶಸ್ತಿಗಳು ವ್ಯಕ್ತಿಗಲ್ಲ ಆತನ ಕೃತಿಗೆ ನೀಡುತ್ತಿರುವ ಗೌರವ. ಅಲ್ಲದೆ ನಾವು ಸಾಂಪ್ರದಾಯಕವಾಗಿ ಕೃತಿಗಳು ಲೇಖಕರನ್ನು ರೂಪಿಸುತ್ತವೆ ಎಂದರು.

ಸಾಹಿತ್ಯ ಅನನ್ಯವಾದ ಸಂವೇದನೆ, ದಿನ ನಿತ್ಯ ಬಳಸುವ ಶಬ್ದ, ಪದ, ಅನನ್ಯವಾದ ಅನುಭವವನ್ನು ಅಭಿವ್ಯಕ್ತಿ ಮಾಡಬೇಕಾಗುತ್ತದೆ. ಜೊತೆಗೆ ಓದುಗನು ಕೂಡ ಅನುಭವಿಸುವುಂತೆ ಮಾಡಬಹುದಾಗಿದೆ, ಓದುಗನಲ್ಲಿರುವ ಸಾಂಸ್ಕೃತಿಕ ಸ್ಮÈತಿ ಜಾಗೃತಗೊಳಿಸಬೇಕು. ಬರವಣಿಗೆಯಲ್ಲಿ ಕಲಾತ್ಮಕತೆ ಅಗತ್ಯವಾಗಿದ್ದು, ಸಾಹಿತಿಗಳು ಪರಾವಲಂಬಿಯಾಗಬಾರದು. ಸಂವಿಧಾನ ರಾಜಕೀಯ ಪಠ್ಯವಾಗಿ ನೋಡದೆ ಸಾಂಸ್ಕೃತಿಕ ಪಠ್ಯವಾಗಿ ಅರಿಯಬೇಕಾಗಿದೆ ಎಂದು ಹೇಳಿದರು.

ತೋವಿವಿ ಕುಲಪತಿ ಡಾ.ವಿಷ್ಣುವರ್ಧನ ಮಾತನಾಡಿ, ನಾಡಿನ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಸಾಹಿತಿಗಳು ಚಿಂತನೆಮಾಡಬೇಕಿದೆ. ಆ ನಿಟ್ಟಿನಲ್ಲಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದ್ದು. ಸಾಹಿತ್ಯ ಜನರನ್ನು ಸದಾ ಎಚ್ಚರಿಸುವ ಸಾಧನಗಳು, ಇಂದಿನ ಸಾಹಿತ್ಯ ದಿಕ್ಕು ಎತ್ತ ಸಾಗಿದೆ ಎಂಬುದನ್ನು ಚಿಂತನೆ ಮಾಡಬೇಕಾದ ಅನಿವಾರ್ಯತೆ ಇದೆ. ನಮ್ಮ ನಾಡಿನ ಸಂಸ್ಕೃತಿ ಉಳಿಸುವಲ್ಲಿ ಸಾಹಿತಿಗಳು ಚಿಂತನೆಮಾಡಬೇಕಿದೆ. ಇಂದು ವಾತಾವರಣದಲ್ಲಿ ಏರುಪೇರಾಗುತ್ತಿರುವುದು ನಮಗೆ ಸವಾಲಾಗಿದೆ. ಕೃಷಿ ಭೂಮಿ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ತಿಳಿಸಿದರು.

ಖ್ಯಾತ ವಿಮರ್ಶಕ ಎಸ್.ಆರ್.ವಿಜಯಶಂಕರ, ಕಾದಂಬರಿಗಳು ಜನರಿಗೆ ಬೇಕಾದ ಸಂಪೂರ್ಣ ಮಾಹಿತಿ ಕೊಡಬಹುದಾಗಿವೆ. ಪ್ರಜ್ಞಾವಂತರ ಲೇಖಕರು ಸಾಮಾಜಿಕ ಸಮಸ್ಯೆಗಳನ್ನು ಹತ್ತಿರದಿಂದ ನೋಡಿ ಪ್ರಶ್ನಿಸುವುದು ಅಗತ್ಯವಾಗಿದೆ. ಪ್ರಶ್ನಿಸುವುದರಿಂದ ಸತ್ಯಾಸತ್ಯಗಳನ್ನು ಜನರ ಮುಂಡಿದಲು ಸಹಾಯವಾಗುತ್ತದೆ ಎಂದರು.

ಸಾಹಿತಿ ಕೇಶವ ಮಳಗಿ, ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ಶೆಲ್ಲಿಕೇರಿ ಮಾತನಾಡಿದರು. ವೇದಿಕೆ ಮೇಲೆ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಎಚ್.ಪಿ.ಶೆಲ್ಲಿಕೇರಿ, ಕಸಾಪ ಜಿಲ್ಲಾಧ್ಯಕ್ಷೆ ಶಿವಾನಂದ ಶೆಲ್ಲಿಕೇರಿ ಸೇರಿದಂತೆ ಇತರರು ಇದ್ದರು. ಸಂಗಮೇಶ ಪಾನಶೆಟ್ಟಿ ಪ್ರಾರ್ಥಿಸಿದರು. ಡಾ.ಚಂದ್ರಶೇಖರ ಕಾಳನ್ನವರ ಸ್ವಾಗತಿಸಿದರು. ಗುರು ಗಾಣಗೇರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net