ಸಂವಿಧಾನ ಶಿಲ್ಪಿಗೆ ಭೀಮ ನಮನ

MERAVANIGE
Published on

ಕಲಬುರಗಿ: ಎಲ್ಲೆಡೆ ನೀಲಿ ಧ್ವಜಗಳ ಹಾರಾಟ, ಜೈ ಭೀಮ, ಅಮರ ರಹೇ ಅಂಬೇಡ್ಕರ್ ಘೋಷಣೆಯೊಂದಿಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತ್ಯುತ್ಸವ ನಗರದೆಲ್ಲೆಡೆ ಭಾನುವಾರ ಸಡಗರ ಸಂಭ್ರಮದೊಂದಿಗೆ ಆಚರಿಸಲಾಯಿತು.

ನಗರದ ಜಗತ್ ವೃತ್ತದಲ್ಲಿ ಅಂಬೇಡ್ಕರ್ ಜಯಂತಿ ನಿಮಿತ್ತ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಬಾಬಾಸಾಹೇಬರ್ ಪುತ್ಥಳಿಗೆ ಸಾವಿರಾರು ಜನರು, ಜಿಲ್ಲೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು. ಪುತ್ಥಳಿ ಆವರಣದಲ್ಲಿ ನಿರ್ಮಿಸಿದ್ದ ವೇದಿಕೆಯಲ್ಲಿ ಉಪನ್ಯಾಸಗಳು ನಡೆದವು. ಸಹಸ್ರಾರು ಜನರು ಪುಷ್ಪ, ದೂಪ, ಮೇಣದ ಬತ್ತಿ ಅರ್ಪಿಸಿದರು.

ಜಗತ್ ವೃತ್ತ ಸೇರಿ ಅನೇಕ ಬಡಾವಣೆಗಳಲ್ಲಿ ಅನ್ನ ಸಂತರ್ಪಣೆ, ಯುವಕರು ಗುಂಪು ಗುಂಪಾಗಿ ಬೈಕ್ ರ‍್ಯಾಲಿ, ಆಟೋ ರ‍್ಯಾಲಿ, ಸಂವಿಧಾನದ ಪೀಠಿಕೆಯ ಪ್ರತಿಕೃತಿ ಮೆರವಣಿಗೆ, ಅರಿವಿನ ಜಾಥಾ ನಡೆದವು. ವಿವಿಧ ಬಡಾವಣೆಯ ಸಾರ್ವಜನಿಕರು ಹಲಗೆ, ಡೊಳ್ಳು, ಬಂಜಾರ ಮಹಿಳೆಯರ ನೃತ್ಯದೊಂದಿಗೆ ಜೈಘೋಷಣೆ ಮೊಳಗಿಸುತ್ತ ತಂಡ ತಂಡವಾಗಿ ಆಗಮಿಸಿ, ನಮನ ಸಲ್ಲಿಸಿದರು.

ಜಿಲ್ಲಾಡಳಿತದಿಂದ ಸರಳ ಆಚರಣೆ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸರಳ ಆಚರಿಸಲಾಯಿತು. ಜಗತ್ ವೃತ್ತದಲ್ಲಿರುವ ಪುತ್ಥಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ನಗರ ಪೊಲೀಸ್ ಆಯುಕ್ತ ಚೇತನ್ ಆರ್., ಎಸ್‌ಪಿ ಅಕ್ಷಯ ಹಾಕೆ, ಜಿಪಂ ಸಿಇಒ ಭಂವರಸಿAಗ್ ಮೀನಾ, ಪಾಲಿಕೆ ಆಯುಕ್ತ ಭುವನೇಶ ಪಾಟೀಲ್, ಉಪ ಆಯುಕ್ತರಾದ ಮಾಧವ ಗಿತ್ತೆ, ಐಎಎಸ್ ಗಜಾನನ ಬಾಳೆ, ಎಡಿಸಿ ರಾಯಪ್ಪ ಹುಣಸಗಿ, ಎಸಿ ರೂಪಿಂದ್ರ ಸಿಂಗ್‌ಕೌರ, ಜಾವಿದ್ ಕರಂಗಿ, ಜಯಂತಿ ಸಮಿತಿ ಅಧ್ಯಕ್ಷ ರಾಜು ಸಂಕಾ, ಎಸ್ಸಿ, ಎಸ್ಟಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಮದನಕರ, ವಿಠ್ಠಲ ಗೋಳಾ, ಡಿ.ಜಿ.ಸಾಗರ, ಅಂಬಾರಾಯ ಅಷ್ಟಗಿ ಇತರರಿದ್ದರು.
ನಮನ ಸಲ್ಲಿಸಿದ ಜನಪ್ರತಿನಿಧಿಗಳು: ಸಚಿವರಾದ ಪ್ರಿಯಾಂಕ್ ಖರ್ಗೆ, ಸಚಿವ ಡಾ.ಶರಣಪ್ರಕಾಶ ಪಾಟೀಲï, ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಅಲ್ಲಂಪ್ರಭು ಪಾಟೀಲ್, ಶಾಸಕ ಬಸವರಾಜ ಮತ್ತಿಮಡು, ಶಶೀಲ ನಮೋಶಿ, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್, ಮೇಯರ್ ವಿಶಾಲ ದರ್ಗಿ, ಬಿಜೆಪಿ ಗ್ರಾಮೀಣ ಅಧ್ಯP್ಷÀ ಶಿವರಾಜ ಪಾಟೀಲï ರz್ದÉÃವಾಡಗಿ, ನಗರ ಜಿ¯್ಲÁಧ್ಯP್ಷÀ ಚಂದು ಪಾಟೀಲï, ಬಾಬುರಾವ ಚವ್ಹಾಣ್, ಕೃಷ್ಣಾ ರಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net