ಸಂವಿಧಾನ ವಜ್ರ ಮಹೋತ್ಸವ 26ಕ್ಕೆ

Constitution
Published on

ಚಿತ್ರದುರ್ಗ: ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ಕೊಡುಗೆಯಾಗಿ ನೀಡಿದ ಸಂವಿಧಾನದ ವಜ್ರ ಮಹೋತ್ಸವದ ಹಬ್ಬವನ್ನು ನ. 26ರಂದು ನಗರದ ಹಳೆ ಮಾಧ್ಯಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ವಜ್ರ ಮಹೇಶ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಬ್ಬವೂ ಯಾವ ಜಾತಿಗೂ ಸೀಮಿತವಲ್ಲ. ರಾಷ್ಟ್ರದ ಮಹನೀಯರಾದ ಬುದ್ಧ, ಬಸವ, ಅಂಬೇಡ್ಕರ್ ತತ್ವಾಧಾರದೊಂದಿಗೆ ಆಚರಿಸಲಾಗುವುದು ಎಂದರು.

ವಕೀಲ ನರಹರಿ ಮಾತನಾಡಿ, ಸಂವಿಧಾನ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದೇವೆ. ಮಹಾನಾಯಕ ಧಾರಾವಾಹಿಯ ಎಲ್ಲ ಕಲಾವಿದರು, ಸಾಹಿತಿಗಳು, ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮುನ್ನಾ ದಿನ 25ರಂದು ಅಂಬೇಡ್ಕರ್ ವೃತ್ತದಿಂದ ಬೆಳಗ್ಗೆ 10ಕ್ಕೆ ಬೈಕ್ ರ‌್ಯಾಲಿ ನಡೆಯಲಿದ್ದು, ರಾಜ ಬೀದಿಗಳಲ್ಲಿ ಸಂಚರಿಸಲಿದೆ ಎಂದರು.

ಗುತ್ತಿಗೆದಾರ ಬ್ಯಾಲಾಳ್ ಜಯಪ್ಪ, ವಕೀಲರಾದ ವಿಶ್ವಾನಂದ, ಎಸ್.ಕೆ.ಸುರೇಶ್ ಬಂಜಗೆರೆ, ಎಸ್.ದಯಾನಂದ್, ಮುನಿ, ಸುನಿಲ್, ಪ್ರಸನ್ನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net