ಸಂವಿಧಾನ ಮಕ್ಕಳಿಗೆ ವಿಶೇಷ ಹಕ್ಕುಗಳನ್ನು ನೀಡಿದೆ

download--10
Published on

ಚಿತ್ರದುರ್ಗ: ಮಕ್ಕಳ ಹಕ್ಕುಗಳ ಕುರಿತಂತೆ ಅವರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ ಎಂದು ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ನಾಗಭೂಷಣ ಹೇಳಿದರು.
ಯುನಿಸೆಫ್,ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ, ಪೀಪಲ್, ಸ್ಲೈಟ್ಸ್ , ಪರಿವರ್ತನ ಹಾಗೂ ಮೊಳಕಾಲ್ಮೂರು ಅಕ್ಷರ ಗ್ರಾಮೀಣ ವಿಕಾಸ ಸಂಸ್ಥೆಗಳ ಸಹಯೋಗದಲ್ಲಿ ನಗರದ ಪತ್ರಿಕಾಭವನದಲ್ಲಿ ಸೋಮವಾರ ಆಯೋಜಿಸಿದ್ದ'ಮಕ್ಕಳ ಹಕ್ಕುಗಳ ಸಂಸತ್'ಜಿಲ್ಲಾ ಮಟ್ಟದ ಮಕ್ಕಳ ಸಮಾ ಲೋಚನೆ ಕಾರ‌್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ನಮಗೆ ನೀಡಿರುವ ಸಂವಿಧಾನದಲ್ಲಿ ಮಕ್ಕಳಿಗೆ ವಿಶೇಷವಾದ ಹಕ್ಕುಗಳನ್ನು ಕೊಟ್ಟಿದ್ದಾರೆ. ಇವುಗಳೆಡೆ ಜಾಗೃತಿ ಮೂಡಿಸಬೇಕಿದೆ. ಸಂವಿಧಾನದ ಆಶಯಗಳನ್ನು ಸಾಕಾರ ಗೊಳಿಸುವುದು ದೇಶದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಮುದಾಯದ ಬ ಹು ಮುಖ್ಯ ಭಾಗವಾಗಿರುವ ಮಕ್ಕಳು ತಮ್ಮ ಹಕ್ಕುಗಳೆಡೆ ಅರಿವು ಪಡೆದುಕೊಳ್ಳುವುದು ಅಗತ್ಯವಿದೆ ಎಂದರು.
ಜಿಲ್ಲಾಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ ಮಾತನಾಡಿ,ಪ್ರತಿಯೊಬ್ಬ ಮಕ್ಕಳಿಗೆ ಬದುಕುವ ಹಕ್ಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ಬಹಳಷ್ಟು ಮಕ್ಕಳು ಬಾಲ್ಯವಿವಾಹ,ಲೈಂಗಿಕ ಶೋಷಣೆ,ಬಾಲಕಾರ್ಮಿಕ ಪದ್ಧತಿಗೆಯಂಥ ಸಮಸ್ಯೆಗಳಿಗೆ ಸಿಲುಕಿರುತ್ತಾರೆ. ಇಂತವರ ರಕ್ಷಣೆಗಾಗಿ ಸರ್ಕಾರ ಸಹಾಯ ವಾಣಿ(1098)ಸ್ಥಾಪಿಸಿದೆ. ಮಕ್ಕಳು ತಮ್ಮ ಸಮಸ್ಯೆಗಳನ್ನು ತಿಳಿಸಿದರೆ ಇಲಾಖೆ ಸಿಬ್ಬಂದಿ ರಕ್ಷಣೆಗೆ ಧಾವಿಸಲಿದ್ದಾರೆ ಎಂದರು.
ಪೀಪಲ್ ಸಂಸ್ಥೆ ಕಾರ‌್ಯದರ್ಶಿ ಎಲ್.ಮಂಜುನಾಥ್ ಮಾತನಾಡಿ, ಜನಪ್ರತಿನಿಧಿಗಳು ಮಕ್ಕಳ ಸಮಸ್ಯೆಗಳನ್ನು ಕುರಿತು ಶಾಸನ ಸಭೆಗಳಲ್ಲಿ ಮಾತನಾ ಡಿದ ಉದಾಹರಣೆಗಳಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಪರಿವರ್ತನ ಸಂಸ್ಥೆ ಕಾರ‌್ಯದರ್ಶಿ ಕೆ. ಕಲ್ಲೇಶ್, ಗಾಯಕ ಡಿ.ಒ.ಮುರಾರ್ಜಿ ಮಾತನಾಡಿದರು. ವಿದ್ಯಾರ್ಥಿಗಳಾದ ಮೇಘ ರಾಜ, ಇಂಚರ, ಶಿಕ್ಷಕ ಡಿ.ಕಲ್ಲೇಶ್ ಇತರರು ಇದ್ದರು. ಎಚ್.ಮಲ್ಲಿಕಾರ್ಜುನ್ ಸ್ವಾಗತಿಸಿ, ಗಾಯಕ ಎಂ.ಕೆ.ಹರೀಶ್ ನಿರೂಪಿಸಿದರು. ಸೌಜನ್ಯ ಪ್ರಾರ್ಥಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net