ಸಂವಿಧಾನ ಬೆಳಕು ನೀಡುವ ಜ್ಯೋತಿ

bkt-11-1
ಬಾಗಲಕೋಟೆ ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಸಿಟಿಜನ್ಸ್ -Áರ್ ಸೋಷಿಯಲ್ ಜಸ್ಟೀಸ್ ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ಸನ್ಮಾನ ಕಾರ್ಯಕ್ರಮದಲ್ಲಿ ಮಾಜಿ ಸಿಎಂ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಸಂವಿಧಾನ ಬದಲಾಯಿಸಿದವರು ಯಾರು? ಪುಸ್ತಕ ಬಿಡುಗಡೆಗೊಳಿಸಿದರು. ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಎನ್.ಮಹೇಶ, ಲೇಖಕ ವಿಕಾಸಕುಮಾರ ಪಿ. ಇದ್ದರು.
Published on

ಬಾಗಲಕೋಟೆ: ಸಂವಿಧಾನ ಇದ್ದರೇ ನಾವು ಇರುತ್ತೇವೆ. ಇಲ್ಲವಾದಲ್ಲಿ ಇಲ್ಲ. ಸಂವಿಧಾನ ಬೆಳಕು ನೀಡುವ ಜ್ಯೋತಿ ಇದ್ದಂತೆ. ಹೊಸ ಪೀಳಿಗೆ ಎಳೆದೊಯ್ಯಬೇಕು ಎಂದು ಮಾಜಿ ಸಿಎಂ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ನಗರದ ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಸಿಟಿಜನ್ಸ್ -Áರ್ ಸೋಷಿಯಲ್ ಜಸ್ಟೀಸ್ ಜಿಲ್ಲಾ ಘಟಕದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ಸನ್ಮಾನ ಹಾಗೂ ಸಂವಿಧಾನ ಬದಲಾಯಿಸಿದವರು ಯಾರು? ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬಾಬಾ ಸಾಹೇಬ ಅಂಬೇಡ್ಕರ್ ಸಮಾನತೆ, ಅಸ್ಪÈಶ್ಯತೆ ಹೋಗಲಾಡಿಲು ಸಂವಿಧಾನ ರಚಿಸಿದ ಪರಿಣಾಮ ಇಂದು ಬದಲಾವಣೆ ಆಗಲು ಸಾಧ್ಯವಿದೆ. ಬಸವಣ್ಣವರ ಆಶಯ ಸಂವಿಧಾನದಲ್ಲಿ ಅಡಕವಾಗಿದೆ. ಮುಖ್ಯವಾಗಿ ಕಲ್ಯಾಣ ರಾಜ್ಯದ ಚಿಂತನೆ ಅಡಗಿದೆ. ಕಾಂಗ್ರೆಸ್‌ಗೆ ಅಂಬೇಡ್ಕರ ಅವರ ಹೆಸರು ಹೇಳುವ ನೈತಿಕತೆ ಇಲ್ಲ. ಅಷ್ಟೊಂದು ಅವಮಾನ, ಕಿರುಕುಳ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಸಿದ್ದರಾಮಯ್ಯ ಸಮಾಜವಾದಿ ಸಿದ್ಧಾಂತವನ್ನು ದೇವರ ಕೊಠಡಿಯಲ್ಲಿ ಇಟ್ಟಿದ್ದಾರೆ. ಮಾತಿನಲ್ಲಿ ಅಷ್ಟೇ ವ್ಯಕ್ತವಾಗುತ್ತಿದೆ. ಆಡಳಿತದಲ್ಲಿ ಇಲ್ಲ. ಎಂ.ಎನ್.ರಾಯ ನಮ್ಮ ತಂದೆಯ ರಾಜಕೀಯ ಗುರುವಾಗಿದ್ದರು. ಸ್ವತಂತ್ರ‍್ಯ ಪೂರ್ವದಲ್ಲಿ ದೊಡ್ಡ ಚಿಂತಕರಾಗಿದ್ದವರು. ಸಂವಿಧಾನ ಹಾಗೂ ಭೂಮಿಗೂ ಸಂಬAಧವಿದೆ ಅಂತ ತೋರಿಕೊಟ್ಟವರು. ಸ್ಪಷ್ಟವಾದ ನಿಲುವು ಹೊಂದಿದ್ದರು. ಇಂದು ಕೂಡಾ ಶೋಷಿತ ಸಮುದಾಯ, ಅಲ್ಪಸಂಖ್ಯಾತರು ಕಾಂಗ್ರೆಸ್ ನಂಬಿ ಮೋಸ ಹೋಗಬಾರದು. ನೈಜವಾದಕ್ಕೆ ಬೆನ್ನೆಲುಬಾಗಿ ನಿಲ್ಲಬೇಕು. ಬಿಜೆಪಿ ಸಂವಿಧಾನ ಹೆಸರಿನಲ್ಲಿ ರಾಜಕೀಯ ಮಾಡುತ್ತಿಲ್ಲ. ಆಶಯಗಳನ್ನು ಈಡೇರಿಸುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಮಂಡಲ್ ಕಮೀಷನ್ ಒಪ್ಪಲಿಲ್ಲ. ವಿ.ಪಿ.ಸಿಂಗ್ ಜಾರಿಗೊಳಿಸಿದರು. ನರೇಂದ್ರ ಮೋದಿ ಹಿಂದುಳಿದ ವರ್ಗಕ್ಕೆ ಹಕ್ಕು ನೀಡಿದರು. ಕಾಂಗ್ರೆಸ್ ಸಂವಿಧಾನದಲ್ಲಿ ಜಾತ್ಯಾತೀತ ಶಬ್ಧ ಸೇರಿಸಿತು. ಆದರೇ ಜಾತಿ ಗಣತಿ ಜಪಿಸುತ್ತಿದೆ. ಬರೀ ನಾಟಕವಾಡುತ್ತಾರೆ. ವೋಡ್ ಬ್ಯಾಂಕ್ ರಾಜಕೀಯ ಅವರ ಉದ್ದೇಶವಾಗಿದೆ. ಇಂದಿರಾ ಗಾಂಽ ರಾಜೀನಾಮೆ ನೀಡಬೇಕಿತ್ತು. ಆದರೇ ಒಂದೇ ರಾತ್ರಿಯಲ್ಲಿ ಸಂವಿಧಾನ ಬದಲಾಯಿಸಿದರು. ಕಾಂಗ್ರೆಸ್ ೭೫ ಕ್ಕೂ ಹೆಚ್ಚು ಸಾರಿ ಸಂವಿಧಾನ ತಿದ್ದುಪಡಿ ಮಾಡಿದೆ. ಅದು ಅಂಬೇಡ್ಕರ ಅವರ ಆಶಯಕ್ಕೆ ವಿರುದ್ಧವಾಗಿ. ಇಷ್ಟೇಲ್ಲ ಆದರು ಸಹ ಪ್ರಾಶ್ಚಿತ ಮಾಡಿಕೊಳ್ಳುತ್ತಿಲ್ಲ ಎಂದು ತಿಳಿಸಿದರು.

ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸಂವಿಧಾನ ವಿಷಯದಲ್ಲಿ ಸುಳ್ಳು ಸುದ್ದಿ ಹಬ್ಬಿಸುವದರಲ್ಲಿ ಕಾಂಗ್ರೆಸ್‌ನವರು ನಿಸ್ಸಿಮರು. ನೆಹರು, ಕಾಂಗ್ರೆಸ್ ಗುಲಾಮಗಿರಿಯಿಂದ ಜನ ಹೊರ ಬರಬೇಕು. ಅನಂತ ಕುಮಾರ ಹೆಗಡೆ ಹೇಳಿದಾಕ್ಷಣ ಸಂವಿಧಾನ ಬದಲಾವಣೆ ಬಿಜೆಪಿ ಮಾಡುವದಿಲ್ಲ. ಸಂವಿಧಾನಕ್ಕೆ ಧಕ್ಕೆ ತಂದವರು ಕಾಂಗ್ರೆಸ್. ೧೯೫೨ ರಲ್ಲಿ ಅಂಬೇಡ್ಕರ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್. ಸಮಾಽಗೂ ಕೂಡಾ ಜಾಗ ನೀಡಲಿಲ್ಲ. ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ. ೧೯೯೦ ರಲ್ಲಿ ಕಾಂಗ್ರೆಸೇತರ ಸರ್ಕಾರ ನೀಡಿತು. ಆರ್‌ಎಸ್‌ಎಸ್, ಬಿಜೆಪಿ ಸಂವಿಧಾನ ಬದಲಾವಣೆ ಮಾಡಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದೆ. ಆದರೇ ಕೈ ಕಟ್ಟಿ ನಿಲ್ಲುವ ಪರಿಸ್ಥಿತಿ ಇದೆ. ಅಂಬೇಡ್ಕರ್ ಅವರಿಗೆ ಅಮಿತ್ ಷಾ ಅವಮಾನ ಮಾಡಿಲ್ಲ. ತಿರುಚುವ ಕೆಲಸ ನಡೆದಿದೆ ಎಂದರು.

ಲೇಖಕ ವಿಕಾಸಕುಮಾರ ಪಿ ಮಾತನಾಡಿ, ಇಂದು ಮೊದಲ ಹಂತದ ಅಭಿಯಾನವಾಗಿದೆ. ಈ ವರೆಗೆ ಸಂವಿಧಾನ ೧೦೬ ತಿದ್ದುಪಡಿ ಆಗಿದೆ. ಅದರಲ್ಲಿ ೭೫ ಬಾರಿ ಕಾಂಗ್ರೆಸ್ ತಿದ್ದುಪಡಿ ಮಾಡಿದೆ. ೨೨ ಸಾರಿ ಬಿಜೆಪಿ ಮಾಡಿದೆ. ಎಸ್ಸಿ,ಎಸ್ಟಿ ಜನರಿಗೆ ಅನ್ಯಾಯ ಮಾಡುತ್ತಿರುವುದು ಕಾಂಗ್ರೆಸ್ ಹೊರತು ಬಿಜೆಪಿ ಅಲ್ಲ. ೧೯೭೬ ರಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದಾಗಲೇ ಸಂವಿಧಾನವನ್ನು ಅಮಾನತ್ತಿನಲ್ಲಿ ಇಡಲಾಯಿತು. ಜನರು ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಗುಳೇದಗುಡ್ಡ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿ.ಪ ಸದಸ್ಯ ಹನುಮಂತ ನಿರಾಣಿ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಎಂ.ಕೆ.ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮುಖಂಡರಾದ ಶಿವಾನಂದ ಟವಳಿ, ಮುತ್ತಣ್ಣ ಬೆಣ್ಣೂರ, ಯಲ್ಲಪ್ಪ ಬೆಂಡಿಗೇರಿ, ರಾಜು ನಾಯ್ಕರ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net