

ಬಾಗಲಕೋಟೆ: ವಿವಿಧ ಜಾತಿ, ಧರ್ಮ, ಭಾಷೆಗಳು ಏಕತೆ ಸಾಽಸಲು ಡಾ.ಬಿ.ಆರ್.ಅಂಬೇಡ್ಕರ ನೀಡಿದ ಸಂವಿಧಾನ ಕಾರಣ. ಇಂತಹ ಶ್ರೇಷ್ಠ ಸಂವಿಧಾನದ ಮೇಲೆ ಅಽಕಾರಕ್ಕೆ ಬಂದ ಬಿಜೆಪಿಯವರು ಸಂವಿಧಾನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಹೊಳೆ ಆಂಜನೇಯ ದೇವಸ್ಥಾನ ಆವರಣದಲ್ಲಿ ಸೋಮವಾರ ದಲಿತ, ಹಿಂದುಳಿದ ಅಲ್ಪಸಂಖ್ಯಾತ ಕಾರ್ಮಿಕ ಪ್ರಗತಿಪರ ರೈತ-ಮಹಿಳಾ ಸಂಘಟನೆಗಳ ಮಹಾ ಒಕ್ಕೂಟದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ರ‍್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.
ಯಾರಾದರೂ ತಮ್ಮ ವಿರುದ್ಧ ಬಾಯಿ ಬಿಟ್ಟರೆ ಸಿಬಿಐ, ಇಡಿ ಮೂಲಕ ಹತ್ತಿಕ್ಕುವ ತಂತ್ರ ಮಾಡುತ್ತಾರೆ. ಸಂವಿಧಾನದ ಅಡಿಯಲ್ಲಿ ರಚಿಸಲಾದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಹಾರಾಷ್ಟç ಅಜೀತ್ ಪವಾರ್ ಸಾವಿರಾರು ಕೋಟಿ ರೂ. ಹಗರಣ ಮಾಡಿ ಜೈಲಿಗೆ ಹೋಗುವ ಸಂದರ್ಭ ಬಂದಿತು. ಬಿಜೆಪಿ ಪಕ್ಷಕ್ಕೆ ಸೇರಿದ ಮೇಲೆ ಎಲ್ಲವು ಕ್ಲೀನ್ ಚಿಟ್ ಆಯಿತು ಎಂದು ಕಿಡಿಕಾರಿದರು.
ಈ ದೇಶವನ್ನು ಅಧಾನಿ, ಅಂಬಾನಿ ಕಂಪನಿಗಳಿಗೆ ಕೊಟ್ಟು ಬಡವರಿಗೆ ದಿಕ್ಕ ಪಾಲು ಮಾಡಿz್ದÁರೆ. ಕೇಂದ್ರದ ಗೃಹ ಸಚಿವ ಅಮಿತ್ ಶಾ ಇತಿಹಾಸ ನಿಮಗೆ ಗೊತ್ತಿರಬೇಕು. ಗಡಿಪಾರಾದಂತವರು ಜೈಲಿಗೆ ಹೋಗಿ ಬಂದAತವರು. ಆದರೇ ಇಂದು ಅಂಬೇಡ್ಕರ ಬಗ್ಗೆ ಅಪಮಾನ ಮಾಡುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಯಾರು ಯಾವುದಕ್ಕೆ ಭಗದ್ಗೀತೆ ಎನ್ನುತ್ತಾರೆ ನನಗೆ ಗೊತ್ತಿಲ್ಲ. ಅಂಬೇಡ್ಕರ ಅವರ ತತ್ವ ಆದರ್ಶಗಳೇ ನಮಗೆ ಭಗವದ್ಗೀತೆ ಎಂದು ಹೇಳಿದರು.
ದಲಿತ ಸಂಘಟನೆ ಅವರು ಇಂಥ ಎ¯್ಲÁ ಹೋರಾಟ ಮಾಡುತ್ತೀರಿ ಆದರೆ ಚುನಾವಣೆ ಬಂದಾಗ ಯಾಮಾರುತ್ತೀರಿ. ಬಿ.ಆರ್.ಅಂಬೇಡ್ಕರ ಕೇಲವ ಎಸ್ಸಿ,ಎಸ್ಟಿ ನಾಯಕರಲ್ಲ. ವಿಶ್ವ ಕಂಡ ಶ್ರೇಷ್ಠ ನಾಯಕ. ಮಹಾನ್ ಮಾನವತಾವಾದಿ. ವ್ಯವಸ್ಥೆಯಲ್ಲಿನ ಲೂಪೋಲ್ಸ್ ಉಪಯೋಗಿಸಿಕೊಳ್ಳುವುದರ ಮುಖಾಂತರ ಬಿಜೆಪಿಯವರು ಅಽಕಾರಕ್ಕೆ ಬರುತ್ತಾರೆ. ಅವರಿಗೆ ಅಂಬೇಡ್ಕರ ಬಗ್ಗೆ ಗೌರವ ಇಲ್ಲ. ಹೀಗಾಗಿ ಬಿಜೆಪಿ ಬಗ್ಗೆ ಎಚ್ಚರವಿರಲಿ ಎಂದು ಗುಡುಗಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ. ವಾಲ್ಮೀಕಿ ಮಹಸಭಾ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ, ನಗರಸಭೆ ಸದಸ್ಯ ಹಾಜಿಸಾಬ ದಂಡಿನ, ಮುಖಂಡರಾದ ಕುತುಬುದ್ಧೀನ್ ಖಾಜಿ, ಎಂ.ಬಿ.ಸೌದಾಗರ, ವೈ.ಸಿ.ಕಾಂಬಳೆ, ಪ್ರೇಮನಾಥ ಗರಸಂಗಿ, ಹೇಮಂತ ಚೂರಿ, ಡಿ.ಬಿ.ಸಿದ್ದಾಪುರ, ಯುವರಾಜ ಬಂಡಿ, ಚಂದ್ರಶೇಖರ ರಾಠೋಡ, ಸಂತೋಷ ಹೊಕ್ರಾಣಿ, ನಿಂಗಪ್ಪ ಗಸ್ತಿ, ಸೈಪುದ್ದೀನ್ ಕಲಾದಗಿ(ನಕಾಶ), ಸಿಕಂದರ ಅಥಣಿ ಇತರರು ಇದ್ದರು.