

ಬೀದರ್: ವಿವಿಧ ದಲಿತ ಸಂಘಟನೆಗಳ ಒಕ್ಕೂಟ, ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಜ.26ರಂದು ಸಂವಿಧಾನ ಜಾರಿ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದೆ.
ನಗರದಲ್ಲಿ ಸೋಮವಾರ ಹಿರಿಯ ಮುಖಂಡ ಬಾಬುರಾವ ಪಾಸ್ವಾನ್ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಚಿಂತಕರನ್ನು ಕರೆಸಲು ನಿರ್ಧರಿಸಲಾಯಿತು. ಇದಕ್ಕಾಗಿ ಸಮಿತಿ ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಶಾಲಿವಾನ ಬಡಿಗೇರ (ಗೌರವಾಧ್ಯಕ್ಷ), ಬಾಬುರಾವ ಪಾಸ್ವಾನ್ (ಅಧ್ಯಕ್ಷ), ಕಲ್ಯಾಣರಾವ ಭೋಸ್ಲೆ (ಕಾರ್ಯಾಧ್ಯಕ್ಷ), ಅಂಬಾದಾಸ ಗಾಯಕವಾಡ (ಪ್ರಧಾನ ಕಾರ್ಯದರ್ಶಿ), ರಘುನಾಥ ಗಾಯಕವಾಡ (ಖಜಾಂಚಿ), ಶ್ರೀಪತರಾವ ದೀನೆ, ಅರುಣ ಕುದರೆ, ಬಾಬುರಾವ ಮಿಠಾರೆ, ದಿಲೀಪ ಭೋಸ್ಲೆ, ರಮೇಶ ಕಟ್ಟಿ ತೂಗಾಂವ, ಅಶೋಕ ಮಾಳಗೆ, ಬುದ್ಧಪ್ರಕಾಶ ಭಾವಿಕಟ್ಟಿ (ಉಪಾಧ್ಯಕ್ಷರು), ರಾಜಕುಮಾರ ಬನ್ನೇರ್, ಮಾರುತಿ ಸೂರ್ಯವಂಶಿ, ಶಿವಕುಮಾರ ನೀಲಿಕಟ್ಟಿ, ಜೀವನ ಬುಡ್ತಾ (ಕಾರ್ಯದರ್ಶಿ), ಅಮೃತರಾವ ಚಿಮಕೋಡೆ, ಅಬ್ದುಲ್ ಮನ್ನಾನ್ ಸೇಠ್, ರಮೇಶ ಡಾಕುಳಗಿ, ಅನೀಲಕುಮಾರ ಬೆಲ್ದಾರ್, ಬಸವರಾಜ ಮಾಳಗೆ, ಆನಂದ ದೇವಪ್ಪ, ಶಂಕರರಾವ್ ದೊಡ್ಡಿ, ರಾಜು ಕಡ್ಯಾಳ (ಸಲಹೆಗಾರ).
ಪ್ರಚಾರ ಸಮಿತಿ: ಪ್ರದೀಪ ನಾಟೇಕರ್ (ಅಧ್ಯಕ್ಷ), ಸುರೇಶ ಜೋಜನಾಕರ್, ಶಶಿಧರ ಭಾಸನ್, ಮೋಹನ ಡಾಂಗೆ, ಝರೆಪ್ಪ ರಾಂಪುರೆ, ಅಂಬರೀಷ್ ಕುದರೆ, ಪವನ ಗುನ್ನಳ್ಳಿಕರ್, ರಾಹುಲ ಡಾಂಗೆ, ರವಿ ಭೂಸಂಡೆ, ಗೌತಮ ಮುತ್ತಂಗಿಕರ್, ಶಿವಕುಮಾರ ಗುನಳ್ಳಿ, ನಿತೀಶ್ ಉಪ್ಪೆ, ಭಗತ್ ಸಿಂಧೆ, ಗೌತಮ ಕಂದಗೂಳ. ಕಲಾ ಮಂಡಳಿ ಸದಸ್ಯರು: ರಾಜಕುಮಾರ ಶೇರಿಕಾರ, ಬಕ್ಕಪ್ಪಾ ದಂಡಿನ್, ಸುನೀಲ ಕಡ್ಡೆ, ದೇವಿದಾಸ ಚಿಮಕೋಡ, ಯೇಸುದಾಸ ಅಲಿಯಂಬರ್. ಮಹಿಳಾ ಸಮಿತಿ: ಗಂಗಮ್ಮ ಫುಲೆ, ರಂಜಿತಾ ಜೈನೂರ, ವೈಶಾಲಿ ಸಾಗರ, ಶಕುಂತಲಾ ಸೋನಿ, ಅರ್ಚನಾ ಕೋಣೆ, ಇಂದುಮತಿ ಮೈಲೂರಕರ್, ಗೌರಮ್ಮ ಜಾನಕೆ, ಕವಿತಾ ಡಾಂಗೆ.