ಸಂವಿಧಾನ ಜಾಗೃತಿ ಜಾಥ ರಥಕ್ಕೆ ಶಾಸಕರಿಂದ ಸ್ವಾಗತ

ಸಂವಿಧಾನ ಜಾಗೃತಿ ಜಾಥ ರಥಕ್ಕೆ ಶಾಸಕರಿಂದ ಸ್ವಾಗತ
Published on

ಹಾಸನ: ಸಂವಿಧಾನ ಜಾಗೃತಿ ಜಾಥ ರಥಕ್ಕೆ ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಆಲೂರು-ಸಕಲೇಶಪುರ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು ಅವರು ಸ್ವಾಗತಿಸಿದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ,ಡಾ: ಬಿ.ಆರ್.ಅಂಬೇಡ್ಕರ್‌ರವರು ಸಂವಿಧಾನದಲ್ಲಿ ಒದಗಿಸಿರುವ ಸವಲತ್ತುಗಳಿಂದ ಸಾಮಾನ್ಯ ಮನುಷ್ಯನು ಸಹ ಶಾಸಕರಾಗಬಹುದು ಆದ್ದರಿಂದ ಎಲ್ಲಾ ಸಂವಿಧಾನದಲ್ಲಿರುವ ಎಲ್ಲಾ ಅಂಶಗಳನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಸಂವಿಧಾನ ಜಾಗೃತ ಜಾಥದ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯ ಬಾಷಣಕಾರರಾಗಿದ್ದ ಉಪನ್ಯಾಸಕರಾದ ಕೃಷ್ಣಯ್ಯ ಮಾತನಾಡಿ, ಸಂವಿಧಾನದ ಬಗ್ಗೆ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸರಳವಾಗಿ ಅರ್ಥವಾಗುವಂತೆ ಮನ-ಮುಟ್ಟುವಂತೆ ತಿಳಿಸಿದರು.
ಶೆಟ್ಟಿಹಳ್ಳಿ ಗ್ರಾಮದವರಾದ ಮರಿಜೋಸೆಫ್ ಮಾತನಾಡಿ, ಡಾ: ಬಿ.ಆರ್. ಅಂಬೇಡ್ಕರ್‌ರವರು ಬಾಲ್ಯದಲ್ಲಿ ಅನುಭವಿಸಿದ ಅಸ್ಪಷ್ಯತೆಯ ಬಗ್ಗೆ ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಶೆಟ್ಟಿಹಳ್ಳಿ ಪಂಚಾಯತಿಯ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳು, ಪಂಚಾಯತಿಯ ಎಲ್ಲಾ ಗ್ರಾಮಗಳಲ್ಲಿರುವ ಶಾಲೆಗಳ ಮಕ್ಕಳು, ಶಿಕ್ಷಕರು, ಮುಖ್ಯೊಪಾದ್ಯಯರು, ಎಲ್ಲಾ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಂವಿಧಾನ ಜಾಗೃತ ಜಾಥಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಟ್ಟಾಯ, ಗೊರೂರು, ಕಾರ್ಲೆ ಮತ್ತು ಅಂಕಪುರ ಗ್ರಾಮ ಪಂಚಾಯತಿಗಳಲ್ಲಿ ಸಂವಿಧಾನ ಜಾಗೃತ ಜಾಥರಥವು ಸಂಚರಿಸಿದ್ದು, ಎಲ್ಲಾ ಗ್ರಾಮ ಪಂಚಾಯಿತಿಗಳ್ಳಿಯೂ ಸಾವಿರಾರು ಮಕ್ಕಳು, ಗ್ರಾಮಸ್ಥರು, ಜನಪ್ರತಿನಿಧಿಗಳು ವಿಶಿಷ್ಟವಾದ ವಾದ್ಯವೃಂದದಿಂದ ಹಾಗೂ ವಿವಿಧ ನೃತ್ಯ ಪ್ರಕಾರಗಳ ಮುಖಾಂತರ ಅದ್ದೂರಿಯಾಗಿ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net