

ಚಿತ್ರದುರ್ಗ: ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್-ಕರ್ನಾಟಕ ಹಾಗೂ ದಿಕ್ಸೂಚಿ ಬಂಜಾರ-ಕರ್ನಾಟಕದಿಂದ ಸಂವಿಧಾನ ಗೌರವ ಅಭಿಯಾನದ ಅಂಗವಾಗಿ ರಾಜ್ಯಮಟ್ಟದ ವಿಚಾರಗೋಷ್ಠಿ ನಗರದ ಉಮಾಪತಿ ಕಲ್ಯಾಣ ಮಂಟಪದಲ್ಲಿ ಜ.18ರ ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.
ಬಾಬಾಸಾಹೇಬರ ಸಂವಿಧಾನ ಬದಲಾಯಿಸಿದ್ದು ಯಾರು? ಬಲಪಡಿಸಿದ್ದು ಯಾರು? ಎಂಬ ವಿಷಯ ಕುರಿತ ಈ ವಿಚಾರ ಗೋಷ್ಠಿಯನ್ನು ಮಾಜಿ ಸಚಿವ ಪ್ರಭುಚೌಹಾಣ್ ಉದ್ಘಾಟಿಸಲಿದ್ದಾರೆ. ಕಲಬುರಗಿ ಮಾಜಿ ಸಂಸದ ಡಾ. ಉಮೇಶ್‌ಜಾಧವ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ವಿಷಯ ಮಂಡಿಸಲಿದ್ದಾರೆ.
ಮಾಜಿ ಸಚಿವ ಬಾಬುರಾವ್‌ಚೌಹಾಣ್, ಮಾಜಿ ಶಾಸಕರಾದ ಬಸವರಾಜ ನಾಯ್ಕ, ಅಶೋಕ್ ನಾಯ್ಕ, ಚಂದ್ರ ನಾಯ್ಕ, ಶಾಸಕರಾದ ಡಾ. ಚಂದ್ರುಲಮಾಣಿ, ಕೃಷ್ಣ ನಾಯ್ಕ, ಡಾ. ಅವಿನಾಶ್ ಜಾಧವ್ ಉಪಸ್ಥಿತರಿರುವರು ಎಂದು ಸಂಘಟಕರಾದ ಜಯಸಿಂಹ ಕಾಟ್ರೋತ್, ಸುರೇಶ್‌ನಾಯ್ಕ, ಡಾ. ಜಯಸಿಂಹ ಹಾಗೂ ಗುರುಪ್ರಸಾದ್ ತಿಳಿಸಿದ್ದಾರೆ.