

ಬೀದರ್: ಭಾರತೀಯ ಸಂವಿಧಾನವು ಕಾನೂನುಗಳ ತಾಯಿ ಇದ್ದಂತೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಕಾಡಲೂರು ಸತ್ಯ ನಾರಾಯಣಾಚಾರ್ಯ ಹೇಳಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ತಾಪಂ ಹಾಗೂ ಜಿಲ್ಲಾ ವಕೀಲರ ಸಂಘದ ವತಿಯಿಂದ ನಗರದ ತಾಪಂ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮನುಷ್ಯನಿಗೆ ಅವರ ಜನನದಿಂದ ಹಿಡಿದು ಕೊನೆಯವರೆಗೂ ಕಾನೂನಿನ ಅವಶ್ಯಕವಿದೆ. ಪ್ರತಿಯೊಬ್ಬರು ಸಂವಿಧಾನವನ್ನು ಪೂರ್ಣವಾಗಿ ಓದಬೇಕು ಮತ್ತು ಕಾನೂನುಗಳ ಕುರಿತು ಅರಿತುಕೊಳ್ಳಬೇಕು ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಜಗತಾಪ ಅಧ್ಯಕ್ಷತೆ ವಹಿಸಿದ್ದರು. ವಿವಿಧ ನ್ಯಾಯಾಲಯಗಳ ನ್ಯಾಯಧೀಶರಾದ ರಾಧಾ ಎಚ್.ಆರ್., ಝರೀನಾ, ಆರ್.ಪಿ.ಗೌಡ., ಯಮನಪ್ಪ ಕೆ., ಸಿದ್ರಾಮ ಟಿ.ಪಿ., ಅಪರ್ಣಾ, ವಿನಾಯಕ ವಣಖಂಡೆ, ಈಶ್ವರ ಮುಸಲ್ಮಾರಿ, ಜಿಲ್ಲಾ ವಕೀಲರ ಸಂಘದ ಜಂಟಿ ಕಾರ್ಯದರ್ಶಿ ಅಂಬಾದಾಸ ವಾಗರಾಜ, ತಾಪಂ ಇಒ ಗದಗೆಪ್ಪ, ಕಾನೂನು ಸೇವೆಗಳ ಪ್ರಾಧಿಕಾರದ ಆಡಳಿತ ಸಹಾಯಕ ಶಂಕ್ರಪ್ಪ ಜನಕಟ್ಟಿ ಇತರರಿದ್ದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಧನರಾಜ ಬಿರಾದಾರ ನಿರೂಪಣೆ ಮಾಡಿದರು. ತಾಪಂ ಸಹಾಯಕ ನಿರ್ದೇಶಕ ಶರತಕುಮಾರ ವಂದಿಸಿದರು.