

ಕಲಬುರಗಿ: ಅನಾರೋಗ್ಯದ ಮಧ್ಯೆ ಡಾ.ಬಿ.ಆರ್.ಅಂಬೇಡ್ಕರ್ ಶೋಷಿತರ ಹಿತಾಸಕ್ತಿ ತಕ್ಕಂತೆ ಸಂವಿಧಾನ ರಚಿಸಿದರು. ಅದರ ಆಶಯ ಈಡೇರಿಸುವಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಯೋಜನಾ ಇಲಾಖೆ ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕ ಡಿ.ಚಂದ್ರಶೇಖರಯ್ಯ ಹೇಳಿದರು.
ಮಹಾಬೋಧಿ ಪ್ರಕಾಶನ, ಮಹೇಂದ್ರ ಫೌಂಡೇಷನ್‌ನಿAದ ಸೋಮವಾರ ಸಂಜೆ ನಗರದ ಎಸ್.ಎಂ.ಪAಡಿತ ರಂಗಮAದಿರದಲ್ಲಿ ಏರ್ಪಡಿಸಿದ್ದ ನವ ಬೌದ್ಧಯಾನ ಕೃತಿ ಲೋಕಾರ್ಪಣೆ ಹಾಗೂ ನೂತನ ಲೋಕಸಭಾ ಸದಸ್ಯ ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಬಾಬಾ ಸಾಹೇಬರಲ್ಲಿದ್ದ ಕರ್ತತೃತ್ವ ಶಕ್ತಿ, ಬದ್ಧತೆಯನ್ನು ಹೊಸ ತಲೆಮಾರಿನ ಯುವಕರು ರೂಢಿಸಿಕೊಳ್ಳಬೇಕು ಎಂದರು.
ಕೇAದ್ರೀಯ ವಿವಿ ಸಹ ಪ್ರಾಧ್ಯಾಪಕ ಡಾ.ಅಪ್ಪಗೆರೆ ಸೋಮಶೇಖರ ಕೃತಿ ಕುರಿತು ಮಾತನಾಡಿ, ಬೌದ್ಧ ಧರ್ಮದ ಆಳ ಮತ್ತು ಅಗಲವನ್ನು ಅರ್ಥ ಮಾಡಿಕೊಳ್ಳಲು ಕೃತಿಯನ್ನು ತಪ್ಪದೆ ಓದಬೇಕು ಎಂದರು.
ಬೆAಗಳೂರಿನ ಭಂತೇಜಿ ಸುಗತಪಾಲ ಸಾನ್ನಿಧ್ಯ ವಹಿಸಿದ್ದರು. ಸಂಸದ ರಾಧಾಕೃಷ್ಣ ದೊಡ್ಡಮನಿ ಉದ್ಘಾಟಿಸಿ, ಕೃತಿ ಲೋಕಾರ್ಪಣೆ ಮಾಡಿದರು.
ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಹಾಗೂ ಲೋಕೋಪಯೋಗಿ ಇಲಾಖೆಯ ನಿವೃತ್ತ ಅಧೀಕ್ಷಕ ಅಭಿಯಂತರ ಮಲ್ಲಿಕಾರ್ಜುನ ಎಂ.ಎಸ್ ಅವರಿಗೆ ಸಮಾರಂಭದಲ್ಲಿ ವಿಶೇಷ ಗೌರವ ಸನ್ಮಾನ ಕೈಗೊಳ್ಳಲಾಯಿತು.
ದಿವ್ಯ ಸಾನ್ನಿಧ್ಯ ಹಾಗೂ ಅಧ್ಯಕ್ಷತೆ ವಹಿಸಿದ್ದ ಭಂತೇಜಿ ಸುಗತಪಾಲ ಅವರು ಬುದ್ಧ ವಂದನೆ ಸಲ್ಲಿಸಿದರು. ಪಿಡಬ್ಲೂಡಿ ಅಧಿಕಾರಿ ಸುಭಾಷ್ ಶಿಕ್ಷಣಕರ್, ಕೆ.ಎಸ್.ಅಭಿಮನ್ಯು, ಪ್ರಮುಖರಾದ ವಿಠ್ಠಲ ಚಿತ್ತಕೋಟೆ, ಎಸ್.ಪಿ.ಸುಳ್ಳದ್, ಡಾ.ಅರವಿಂದ ಕಟ್ಟಿ, ಶಿವಾನಂದ ಖಜುರ್ಗಿ, ಶಂಶುದ್ದೀನ್ ಪಟೇಲ್, ಬಿ.ಎಸ್.ಮಾಲಿ ಪಾಟೀಲ್, ರವೀಂದ್ರ ಸಜ್ಜಿ, ಎಚ್.ಬಿ.ಪಾಟೀಲ್, ಗೀತಾ ಭರಣಿ ಅವರನ್ನು ಸನ್ಮಾನಿಸಲಾಯಿತು.
ಡಾ.ಚಂದ್ರಶೇಖರ ದೊಡ್ಡಮನಿ ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ಡಾ.ಸುರೇಶ ಎಲ್.ಶರ್ಮಾ, ಭೀಮರಾವ್ ಟಿ.ಟಿ., ರಾಜಗೋಪಾಲರೆಡ್ಡಿ, ಪ್ರಭುದೇವ ಪಾಟೀಲ್, ದಶರಥ ಬಾಬು ಒಂಟಿ, ಮಹಾಂತಪ್ಪ ಸಂಗಾವಿ, ಶಾಮ್ ನಾಟೀಕಾರ್, ಈಶ್ವರ ಹೊಸಮನಿ, ವಿಜಯಕುಮಾರ ಜಮಖಂಡಿ, ಡಾ.ಕೆ.ಎಸ್.ಬಂಧು, ನಾಗನಗೌಡ ಪಾಟೀಲ್, ವಿಜಯ ಕಾಂಬಳೆ, ಯಶವಂತ ಶಿಂಧೆ, ಶಶಿಕಾಂತ ಹೋಳ್ಕರ್, ಈಶ್ವರ ಇಂಗನ್, ದೇವನಗೌಡ ಪಾಟೀಲ್, ಸುಜಾತ ಬಿರಾದಾರ, ಸತೀಶ್ ಸಜ್ಜನ್, ಶರಣಬಸವ ಹೆಗ್ಗಡೆ ಇತರರಿದ್ದರು.
ಉಪನ್ಯಾಸಕ ಅಶೋಕ ತಳಕೇರಿ ಸ್ವಾಗತಿಸಿದರು. ಮಹೇಶ ಕುಲಕರ್ಣಿ ನಿರೂಪಣೆ ಮಾಡಿದರು. ಜಮುನಾ ಟಿಳೆ ವಂದಿಸಿದರು.