ಸಂವಿಧಾನ ಅರಿತರೆ ಅಂಬೇಡ್ಕರನ್ನು ಅರಿತಂತೆ

IMG-20220916-WA0169
Published on

ಕಲಬುರಗಿ: ವಿಶ್ವಕ್ಕೆ ಮಾದರಿಯಾದ ಭಾರತದ ಸಂವಿಧಾನವನ್ನಿ ವಿದ್ಯಾರ್ಥಿಗಳು ಅರ್ಥ ಮಾಡಿಕೊಂಡಲ್ಲಿ ಅದರ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅರಿತಂತೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿ.ಟಿ.ಕಾಂಬಳೆ ಹೇಳಿದರು.

ಗುರುವಾರ ಕಲಬುರಗಿ ಸರ್ಕಾರಿ‌ ಮಹಾವಿದ್ಯಾಲಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸ್ಮರಣಾರ್ಥ ಸಾಂಸ್ಕೃತಿಕ ಮತ್ತು ಕ್ರೀಡಾಕೂಟ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್ ಅವರು ಪ್ರಜಾಪ್ರಭುತ್ವ ಸ್ನೇಹಿ ಸಂವಿಧಾನ ನೀಡಿದ್ದರಿಂದಲೆ, ದೇಶದಲ್ಲಿ‌ ಎಂತಹದೇ ಸಮಸ್ಯೆ ಬಂದರು ಅದನ್ನು ಸಮರ್ಥ ನಿಭಾಯಿಸಲಾಗುತ್ತಿದೆ. ಇಂದು ಇಡೀ ವಿಶ್ವ ಭಾರತವನ್ನು ನೋಡುತ್ತಿದೆ ಎಂದರೆ ಅದಕ್ಕೆ ಮೂಲ ಕಾರಣ ನಮ್ಮ ಗಟ್ಟಿಯಾದ ಸಂವಿಧಾನ. ಜಾತಿ, ಮತ, ಪಂಥ, ಧರ್ಮ ಬಿಟ್ಟು‌ ನಾವೆಲ್ಲರು ಒಂದಾಗಿ ಬಾಳಬೇಕಿದೆ ಎಂದು ಕರೆ ನೀಡಿದರು.

ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ದೀನ-ದಲಿತರಿಗೆ ಹೀಗೆ ಪ್ರತಿಯೊಬ್ಬರಿಗೆ ವಾಕ್ ಸ್ವಾತಂತ್ರ್ಯ, ಸಮಾನ ಅವಕಾಶ ನೀಡಲಾಗಿದೆ. ಶಿಕ್ಷಣ ಪಡೆಯುವ ಮೂಲಕ ಪ್ರಗತಿ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕ್ರೀಡಾಪಟುಗಳಿಗೆ ನೆನಪಿನ ಕಾಣಿಕೆ, ಪ್ರಮಾಣ ಪತ್ರ

ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಕಾಲೇಜಿನ ಪ್ರಾಂಶುಪಾಲ ಡಾ.ಶಂಕ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕ್ರೀಡಾ ವಿಭಾಗದ ನಿರ್ದೇಶಕ ಡಾ.ವಿಜಯಕುಮಾರ ಹೆಬ್ಬಾಳಕರ್, ಸಾಂಸ್ಕೃತಿ ಕಾರ್ಯದರ್ಶಿಗಳಾದ ಪ್ರೊ.ರಾಜೇಶ ಅಜಬ್‌ಸಿಂಗ್, ಸಿಬ್ಬಂದಿ ಕಾರ್ಯದರ್ಶಿಗಳಾದ ಡಾ.ಶಶಿಕಿರಣ ಹಂಚನಾಳ, ಸಿಬ್ಬಂದಿ ಜಂಟಿ ಕಾರ್ಯದರ್ಶಿ ಡಾ.ಭುವನೇಶ್ವರಿ ಸೇರಿದಂತೆ ವಿದ್ಯಾರ್ಥಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ಡಾ.ಬಿ.ಆರ್ ಅಂಬೇಡ್ಕರ್ ಸಾಂಸ್ಕೃತಿಕ ಮತ್ತು ಕ್ರೀಡಾಕೂಟದ ಅಧ್ಯಕ್ಷ ಡಾ.ಹುಮೇರಾ ನುಜಹತ್ ಅವರು ಪಂದ್ಯಾವಳಿಗಳ ಬಗ್ಗೆ ವರದಿ ವಾಚನ ಮಾಡಿದರು.

ಸಂಚಾಲಕಿ ಪ್ರೊ.ಮೇರಿ ಮ್ಯಾಥ್ಯೂಸ್ ಸ್ವಾಗತಿಸಿದರು. ಡಾ.ಸುರೇಶ ಮಾಳೆಗಾಂವ‌ ನಿರೂಪಿಸಿದರು. ಡಾ.ರಮೇಶ ವಂದಿಸಿದರೆ, ಡಾ.ರೇಖಾ ಅಣಿಗೇರಿ ಪ್ರಾರ್ಥನೆ ಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net