ಸಂವಹನಕ್ಕೆ ಹಿಂದಿ ಸಹಕಾರಿ

CTD VIDYAVIKASA
Published on

ಚಿತ್ರದುರ್ಗ: ಪ್ರಸಕ್ತ ವಿದ್ಯಾಮಾನದ ಸಂದರ್ಭದಲ್ಲಿ ಎಲ್ಲ ಭಾಷೆಗಳ ಕಲಿಕೆಯೊಂದಿಗೆ ಹಿಂದಿ ಕಲಿಕೆಯ ಅಗತ್ಯವಿದೆ ಎಂದು ವಿದ್ಯಾವಿಕಾಸ ವಿದ್ಯಾಸಂಸ್ಥೆ ಕಾರ‌್ಯದರ್ಶಿ ಬಿ.ವಿಜಯಕುಮಾರ್ ಹೇಳಿದರು.
ಶಾಲೆಯಲ್ಲಿ ಶನಿವಾರ ಹಿಂದಿ ದಿವಸ್ ಆಚರಣೆಯಲ್ಲಿ ಮಾತನಾಡಿ, ನಮ್ಮ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಹಿಂದಿ ವಿಷಯದಲ್ಲಿ ಶೇ.100 ಅಂಕ ಪಡೆದ 18 ವಿದ್ಯಾರ್ಥಿಗಳು ನಮ್ಮ ಶಾಲೆಯಲ್ಲಿ ಇದ್ದಾರೆ. ಮುಂದಿನ ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲೂ ಶೇ.100 ಅಂಕ ಪಡೆಯಬೇಕು. ಹಿಂದಿ ದೇಶದ ಯಾವುದೇ ಮೂಲೆಗೆ ಹೋದರೂ ಸಂವಹನಕ್ಕೆ ನೆರವಾಗಲಿದೆ ಎಂದರು.
ಹಿಂದಿ ವಿಷಯದಲ್ಲಿ ಉತ್ತಮ ಅಂಕ ಪಡೆದ ಕೆ.ಜಿ.ವೇದಿತಾ, ಅಬ್ದುಲ್ ಮನ್ನಾನ್, ಸಿ.ಐ.ಅಭಯ್, ಪಿ.ಸಂತೋಷ್‌ಕುಮಾರ್, ಪಿ.ಎಂ.ವೆನ್ನೆಲಾ, ಡಿ.ಮೃದು ಕೋಟ್ಲಾ, ಕೆ.ಆರ್.ಅಭಿನವ್, ಎಂ.ಜಗನ್ನಾಥ್, ಟಿ.ಯಶಸ್ವಿನಿ, ಎಚ್.ವಿ.ಗಾನವಿ, ಪಿ.ಮೋನಿಷಾ, ಆರ್.ಶ್ರಾವ್ಯ, ಬಿ.ಎಚ್.ಪ್ರಣವ್, ಟಿ.ಎನ್.ರಕ್ಷಾ, ಎನ್.ಎ.ರಮೀಜಾ ಅನ್ವರ್, ಎಚ್.ಎಂ.ಶ್ರೇಯಾ, ಪ್ರಾರ್ಥನಾ ಸುರೇಶ್, ಅನಘ ಎಚ್.ಕಶ್ಯಫ್ ಅವರನ್ನು ಗೌರವಿಸಲಾಯಿತು.
ಸಂಸ್ಥೆ ನಿರ್ದೇಶಕ ಎಸ್.ಎಂ ಪೃಥ್ವೀಶ, ಮುಖ್ಯಶಿಕ್ಷಕ ಎನ್.ಜಿ.ತಿಪ್ಪೇಸ್ವಾಮಿ, ಪ್ರಾಚಾರ್ಯ ಪಿ.ಬಸವರಾಜಯ್ಯ, ಉಪ ಪ್ರಾಚಾರ್ಯ ಬಿ.ಅವಿನಾಶ್ ಇದ್ದರು. ಜಿ.ಆರ್.ತೃಷಾ ಮತ್ತು ಧನ್ಯತಾ ಎಂ.ಪ್ರಾರ್ಥಿಸಿದರು. ಮಸೀರಾನಾಜ್ ಖಾನ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net