ಸಂರಕ್ಷಿತ ಅರಣ್ಯ ಪ್ರದೇಶದಲ್ಲೇ ಮರಗಳ್ಳತನ

13 joida 01
Published on

ಗಿರೀಶ ಪಾಟೀಲ ಜೊಯಿಡಾ

ಇದು ಸಂರಕ್ಷಿತ ಅರಣ್ಯ ಪ್ರದೇಶ. ಮನುಷ್ಯ ಇಲ್ಲಿ ಪ್ರವೇಶಿಸುವುದು ಕಷ್ಟಕರ; ಸುರಕ್ಷಿತವೂ ಅಲ್ಲ. ಆದರೆ, ಇಲ್ಲಿರುವ ಬೆಲೆ ಬಾಳುವ ಮರಗಳು ಮಾತ್ರ ನಿರಂತರವಾಗಿ ಕಾಣೆಯಾಗುತ್ತಿರುವುದು ಸೋಜಿಗದ ವಿಚಾರ.

ಕಾಳಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ಭಾರಿ ಪ್ರಮಾಣದಲ್ಲಿ ಅರಣ್ಯ ಲೂಟಿ ನಡೆಯುತ್ತಿದೆ. ಇದಕ್ಕೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯೇ ಕಾರಣ ಎಂಬ ಆರೋಪ ಕೇಳಿಬಂದಿದೆ.

ಬಾರಗದ್ದಾ ಕಳ್ಳ ಬೇಟೆ ನಿಗ್ರಹ ಕ್ಯಾಂಪ್​ನಿಂದ 3 ಕಿ. ಮೀ. ಸುತ್ತಳತೆಯಲ್ಲಿ ರಸ್ತೆಯ ಪಕ್ಕದಲ್ಲಿಯೇ 40ಕ್ಕೂ ಹೆಚ್ಚು ಕತ್ತರಿಸಿದ ಮರಗಳ ಬುಡಗಳು ಕಾಣಸಿಕ್ಕಿವೆ. ಕೆಲವು ಹಸಿ ಮರಗಳನ್ನೂ ಕತ್ತರಿಸಿದ್ದಾರೆ. ಇದರಲ್ಲಿ ಸಾಗವಾನಿ ಮತ್ತು ಸಿಸಂ ಮರಗಳೇ ಸೇರಿವೆ. ಗಡಿ ತಾಲೂಕಾದ ಇಲ್ಲಿಂದ ಗೋವಾ ರಾಜ್ಯಕ್ಕೆ ಮರದ ತುಂಡುಗಳನ್ನು ಸಾಗಿಸುತ್ತಿ್ತಬಹುದು ಎಂಬ ಶಂಕೆ ವ್ಯಕ್ತವಾಗಿದೆ. 6 ರಿಂದ 8 ಜನರ ತಂಡದ ಕೃತ್ಯ ಇದಾಗಿರಬಹುದು ಎಂಬ ಅನುಮಾನವನ್ನೂ ಸ್ಥಳೀಯರು ವ್ಯಕ್ತಪಡಿಸುತ್ತಾರೆ.

ಅವ್ಯಾಹತವಾಗಿ ಅರಣ್ಯ ಲೂಟಿ ನಡೆಸುವ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

ಬಾರಗದ್ದಾ ಭಾಗದಲ್ಲಿ ಮರಗಳ್ಳತನ ನಡೆದ ಬಗ್ಗೆ ನಮಗೆ ದೂರು ಬಂದಿದೆ. ವಿಸõತ ತನಿಖೆಗೆ ಎಸಿಎಫ್ ಹಾಗೂ ಆರ್​ಎಫ್​ಒ ಅವರಿಗೆ ಆದೇಶಿಸಿದ್ದೇನೆ. ಈ ಸಂಬಂಧ ಎರಡು ತಿಂಗಳ ಹಿಂದೆ ಹಾಗೂ 6 ತಿಂಗಳ ಹಿಂದೆ ಒಟ್ಟು ಎರಡು ಎಫ್​ಐಆರ್ ಕೂಡ ದಾಖಲಾಗಿದೆ. ತನಿಖೆಯಲ್ಲಿ ಅರಣ್ಯ ಅಧಿಕಾರಿಗಳ ಪಾಲುದಾರಿಕೆ ಇದ್ದರೆ ಖಂಡಿತ ಕ್ರಮ ಕೈಗೊಳ್ಳಲಾಗುವುದು. ಮಾರಿಯಾ ಕ್ರಿಸ್ತರಾಜು ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net