ಸಂಯಮ ಸುದ್ದಿ ನೀಡುವತ್ತ ಇರಲಿ ಚಿತ್ತ-ಪತ್ರಕರ್ತ ಬಿ.ಎನ್. ಮಲ್ಲೇಶ್

IMG-20230319-WA0018_20230319230621653.jpg
Published on

ದಾವಣಗೆರೆ: ಪತ್ರಕರ್ತರು ಸಂಯಮದ ಸುದ್ದಿಗಳಿಗೆ ಗಮನ ನೀಡಬೇಕೆಂದು ಪತ್ರಕರ್ತ ಬಿ.ಎನ್.ಮಲ್ಲೇಶ್ ಸಲಹೆ ನೀಡಿದರು.

ಮಾಧ್ಯಮ ಅಕಾಡೆಮಿ ಹಾಗೂ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತ ದಾವಣಗೆರೆ ಜಿಲ್ಲೆ ಮೂಲದ ಪತ್ರಕರ್ತರಿಗೆ ಜಿಲ್ಲಾ ವರದಿಗಾರರ ಕೂಟದಿಂದ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಮಾತನಾಡಿದರು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳು ಸತ್ಯವೇ ಎಂಬುದನ್ನು ಪರಿಶೀಲಿಸಿ ಬಿತ್ತರಿಸಬೇಕಿದೆ. ಪತ್ರಕರ್ತರಿಗೆ ಭಾಷಾ ಶುದ್ಧಿ ಮುಖ್ಯ, ಇದರಲ್ಲಿ ಯಾವುದೇ ರಾಜೀ ಇಲ್ಲ. ಇತರೆ ಪತ್ರಿಕೆಗಳನ್ನು ಓದುವ ಮೂಲಕ ನಿರಂತರ ಅಧ್ಯಯನ ಶೀಲರಾಗಬೇಕು ಎಂದು ಹೇಳಿದರು.

ಪತ್ರಕರ್ತ ಎನ್.ಡಿ.ಶಾಂತಕುಮಾರ್ ಮಾತನಾಡಿ ಪತ್ರಿಕೋದ್ಯಮದಲ್ಲಿ ಪರಿಪೂರ್ಣತೆ ಎಂಬುದಿಲ್ಲ. ಪ್ರತಿನಿತ್ಯವೂ ಹೊಸ ಬೆಳವಣಿಗೆ ಆಗುತ್ತಿರುವ ಕಾರಣಕ್ಕೆ ನಿರಂತರ ಅಧ್ಯಯನಶೀಲತೆ ಮುಖ್ಯ. ಓದುವಿಕೆ ನಿಂತರೆ ನಮ್ಮ ಬೆಳವಣಿಗೆ ನಿಲ್ಲಲಿದೆ. ನಿತ್ಯವೂ ಅಪ್‌ಡೇಟ್ ಆಗಬೇಕಿದೆ ಎಂದು ಹೇಳಿದರು.

ಲೇಖಕ, ಪತ್ರಕರ್ತ ಆರ್.ಜಿ.ಹಳ್ಳಿ ನಾಗರಾಜ್ ಮಾತನಾಡಿ ಇಂದು ಪತ್ರಿಕೆಗಳು ಕವಲುದಾರಿಯಲ್ಲಿವೆ. ಹೀಗಾಗಿ ಪತ್ರಕರ್ತರ ಎದುರು ಹೆಚ್ಚಿನ ಸವಾಲುಗಳಿವೆ ಎಂದರು.

ಪತ್ರಕರ್ತರಾದ ಕೆ. ಚಂದ್ರಣ್ಣ, ಚಂದ್ರಹಾಸ ಹಿರೇಮಳಲಿ, ಜಿ.ಎಚ್.ವೆಂಕಟೇಶ್, ಶಾಂಭವಿ ಡಿ.ಜಿ.ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಎಂ.ಬಿ.ನವೀನ್, ರಮೇಶ್ ಜಹಗೀರ್‌ದಾರ್, ನಾಗರಾಜ ಬಡದಾಳ್, ತಾರಾನಾಥ್ ಮಾತನಾಡಿದರು. ರವಿಬಾಬು ಸ್ವಾಗತಿಸಿದರು. ಮಧು ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು. ವಾಸುದೇವ್ ವಂದಿಸಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net