ಸಂಭ್ರಮದಿಂದ ಜರುಗಿದ ಹೆಜ್ಜೆಳ್ಳು ಜ್ಯೋತಿ

SRP_20-01jpg
Published on

ಶ್ರೀರಂಗಪಟ್ಟಣ: ಪಟ್ಟಣದ ಹುಲಿಯೂರು ದುರ್ಗಿ ಶ್ರೀ ಅಜ್ಜಮಾರಮ್ಮನ ಪೂಜಾ ಮಹೋತ್ಸವ ಹಾಗೂ ವರ್ಷಕ್ಕೊಮ್ಮೆ ಎಳನೀರು(ಹೆಜ್ಜೆಳ್ಳು)ಜ್ಯೋತಿ ಬೆಳಗಿಸುವ ಆಚರಣೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನೆರವೇರಿತು. ಪಟ್ಟಣದ ಗಂಗಾಮತಸ್ಥರ ಬೀದಿಯಲ್ಲಿರುವ ಶಕ್ತಿದೇವಿ ದೇಗುಲದಲ್ಲಿ ಭಾನುವಾರ ತಡರಾತ್ರಿವರೆಗೂ ಪುರಜನರಿಂದ ವಿಶೇಷವಾಗಿ ಹಬ್ಬ ಆಚರಣೆ ನಡೆಸಿ ಸರ್ವಜನರ ಸುಭೀಕ್ಷತೆಗೆ ಪ್ರಾರ್ಥಿಸಲಾಯಿತು. ಪ್ರತಿ ವರ್ಷದಂತೆ ಶಿವರಾತ್ರಿಯ ಮಾರನೇ ದಿನ ದೇವಾಲಯದಲ್ಲಿ ದೇವರ ಗುಡ್ಡಪ್ಪ ಕುಮಾರ್ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಗಂಗೆ ಪೂಜೆ ಸಲ್ಲಿಸಲಾಯಿತು. ಈ ವೇಳೆ ಕತ್ತಿ ಪವಾಡ, ತೆಂಗಿನ ಕಾಯಿ ತಲೆಗೆ ಹೊಡೆದುಕೊಳ್ಳುವ ಕಾಯಿ ಪವಾಡ ನಡೆದವು. ಹರಕೆ ಹೊತ್ತ ಹಲವು ಭಕ್ತರು ತಲೆಗೆ ಕಾಯಿ ಹೊಡೆಸಿಕೊಂಡರು. ಬಳಿಕ ಮಡಿ ನೀರಿನೊಂದಿಗೆ ಕರಗ ಹೊತ್ತು ಮೆರವಣಿಗೆ ಮಾಡಲಾಯಿತು. ಭಕ್ತರು ದೇವರ ಪದಗಳನ್ನು ಹಾಡಿ ಕುಣಿದು ಉತ್ಸವದ ಮೆರವಣಿಗೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net