ಸಂಭ್ರಮದಿಂದ ಜರುಗಿದ ಶ್ರೀನಿವಾಸ ಕಲ್ಯಾಣೋತ್ಸವ

27ydg02...
Published on


ಯಾದಗಿರಿ: ಬೆಂಗಳೂರಿನ ಶ್ರೀವಾರಿ ಫೌಂಡೇಶನ್ನಿಂದ ಅನುಗೃಹ ಕ್ಷೇತ್ರದಲ್ಲಿ ಗುರುವಾರ ಸಂಜೆ ಶ್ರೀನಿವಾಸ ಕಲ್ಯಾಣೋತ್ಸವ ಅತ್ಯಂತ ಸಂಭ್ರಮದಿಂದ ಜರುಗಿತು. ಕಲಿಯುಗದ ಪ್ರತ್ಯಕ್ಷ ದೇವರೆಂದೇ ಕರೆಯಲ್ಪಡುವ ಶ್ರೀನಿವಾಸ ಸ್ವಾಮಿ ತಿರುಪತಿ ದೇವಸ್ಥಾನದ ಗರ್ಭಗುಡಿಯಲ್ಲಿರುವ ಮಾದರಿಯಲ್ಲಿ ವೇದಿಕೆ ನಿಮರ್ಿಸಿ ತಿಮ್ಮಪ್ಪನ ಮೂತರ್ಿಯನ್ನು ಪ್ರತಿಷ್ಠಾಪಿಸಲಾಗಿತ್ತು.
ಭಕ್ತರು ವೆಂಕಟರಮಣ ದೇವರ ದರ್ಶನ ಪಡೆದು ಪುನೀತರಾದರು. ನೂರಾರು ಭಕ್ತರ ನಡುವೆ ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರನ್ನು ವೈಭವದಿಂದ ಮೆರವಣಿಗೆಯ ಮೂಲಕ ಕಲ್ಯಾಣೋತ್ಸವ ಮಂಟಪಕ್ಕೆ ಕರೆತರಲಾಯಿತು.

ಬಳಿಕ ಸ್ವಾಮಿಯನ್ನು ತೊಟ್ಟಿಲಿನಲ್ಲಿರಿಸಿ ಚಾಮರ ಸೇವೆ ನಡೆಸಲಾಯಿತು. ಭಕ್ತರು ಈ ವೇಳೆ ಗೋವಿಂದ ನಾಮಸ್ಮರಣೆಯನ್ನು ಮಾಡುತ್ತ ಪುನೀತರಾದರು.

ಶ್ರೀನಿವಾಸ ಪದ್ಮಾವತಿ ದೇವಿಯ ಕಲ್ಯಾಣೋತ್ಸವವು ಹಲವಾರು ಪುರೋಹಿತರ ಮಂತ್ರ ಘೋಷಗಳೊಂದಿಗೆ ಅತ್ಯಂತ ವೈಭವದಿಂದ ನಡೆಯಿತು. ಬಳಿಕ ತೀರ್ಥ, ಪ್ರಸಾದ ಹಾಗೂ ಲಡ್ಡು ಪ್ರಸಾದದ ವಿತರಣೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net