

ಸುಂಟಿಕೊಪ್ಪ: ಸುಂಟಿಕೊಪ್ಪ ವಾಹನ ಚಾಲಕರ ಸಂಘದಿಂದ ಸುವರ್ಣ ವಾರ್ಷಿಕೋತ್ಸವದ ಸಮಾರಂಭದ ಅಂಗವಾಗಿ ಮಂಗಳವಾರ ಆಯುಧ ಪೂಜೆ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಬಿ.ಎ.ಜೀವಿಜಯ ವಾಹನ ಚಾಲಕರ ಸಂಘ ನಡೆದು ಬಂದ ದಾರಿ ಬಗ್ಗೆ ವಿವರಿಸಿದರು.
ಆಂಬುಲೆನ್ಸ್ ದಾನಿ ಜರ್ಮಿ ಡಿಸೋಜ ಮಾಡನಾಡಿ, ಅಂಬುಲೆನ್ಸ್ ನಿರ್ವಹಣೆ ಮತ್ತು ಉಪಯೋಗವನ್ನು ಚೆನ್ನಾಗಿ ಮಾಡಬೇಕು ಅರ್ಥಿಕವಾಗಿ ಸಂಕಷ್ಟದಲ್ಲಿ ಇರುವವರಿಗೆ ನೇರವಾಗಬೇಕೆಂದು ಮನವಿ ಮಾಡಿದರು. ಸುಂಟಿಕೊಪ್ಪ ವಾಹನ ವಾಲಕರ ಸಂಘದ ಅಭಿವೃದ್ಧಿ ಕಾಮಗಾರಿಗೆ 2 ಲಕ್ಷ ರೂ. ನೀಡುವುದಾಗಿ ಮಡಿಕೇರಿ ಶಾಸಕರು ತಿಳಿಸಿದರು.
ಕಾಂಗ್ರೆಸ್ ಮುಖಂಡ ಡಾ. ಮಂಥರ್‌ಗೌಡ ಸುವರ್ಣ ಸಾರಥಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಅಂಬುಲೆನ್ಸ್ ಕೊಡುಗೆ ನೀಡಿದ ಜರ್ಮಿಡಿಸೋಜ ದಂಪತಿಗೆ ಸನ್ಮಾನಿಸಲಾಯಿತು.
ಗ್ರಾ.ಪಂ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಪ್ರಸಾದ್‌ಕುಟ್ಟಪ್ಪ , ಗ್ರಾಪಂ ಸದಸ್ಯರಾದ ರಫೀಕ್‌ಖಾನ್, ಆಲಿಕುಟ್ಟಿ, ಸೋಮನಾಥ್, ಮಂಜುಳಾ, ಗೀತಾ, ವಸಂತಿ, ಮಂಗಳಾ, ಕಾನೂನು ಸಲಹೆಗಾರ ಎ.ಲೋಕೇಶ್‌ಕುಮಾರ್, ಉದ್ಯಮಿ ಮೊಯ್ದು, ಕೃಷಿಕ ರಾಮಣ್ಣ, ಸಂಘದ ಮಾಜಿ ಅಧ್ಯಕ್ಷರಾದ ಜಿ.ಎಲ್.ನಾಗರಾಜ್, ಕೆ.ವಿ.ಕಿಟ್ಟಣ್ಣರೈ, ಕೆ.ಎಚ್.ಕೃಷ್ಣಪ್ಪ, ಎಂ.ಎ.ಉಸ್ಮಾನ್, ಎ.ಎ.ಜಬ್ಬರ್, ಕೆ.ಎಂ.ವಿನೇಶ್ ಪೂವಪ್ಪ, ಎಂ.ಎ.ಉಸ್ಮಾನ್, ಮುಖಂಡರಾದ ಬಿ.ಬಿ.ಭಾರತೀಶ್, ವಿ.ಪಿ.ಶಶಿಧರ್, ಪಿ.ಎಂ.ಲತೀಫ್, ಕ್ಲಾಡಿಯಸ್ ಲೋಬೋ ಇದ್ದರು ಇದ್ದರು.