

ಚಿಟಗುಪ್ಪ: ಉಡಬಾಳ ಗ್ರಾಮದಲ್ಲಿ ಭಾಗಮ್ಮ ದೇವಿ ಪಲ್ಲಕ್ಕಿ ಉತ್ಸವ ಬುಧವಾರ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಸಡಗರ ಸಂಭ್ರಮದಿಂದ ನಡೆಯಿತು.
ಗ್ರಾಮದ ರೇವಣಯ್ಯ ಮಠಪತಿ ಮನೆಯಲ್ಲಿ ಹಳ್ಳಿಖೇಡ ಚಿಕ್ಕಮಠದ ಪೀಠಾಧಿಪತಿ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ, ಭದ್ರೇಶ್ವರ ಮಠದ ಶ್ರೀ ಶಿವುಕುಮಾರ ಸ್ವಾಮೀಜಿ ಅವರು ಉತ್ಸವಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ದೇವಿ ಶಕ್ತಿ ಸ್ವರೂಪಿಣಿಯಾಗಿದ್ದು, ಭಕ್ತಿಯಿಂದ ಪೂಜಿಸಿ ಆರಾಧಿಸಿದಲ್ಲಿ ಶಕ್ತಿ ಪ್ರಾಪ್ತಿಯಾಗುತ್ತದೆ ಎಂದರು.
ಗ್ರಾಮದ ಮುಖ್ಯ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು. ದಾರಿಯುದ್ದಕ್ಕೂ ದೇವಿ ಭಾಗಮ್ಮ ತಾಯಿಗೆ ಜಯವಾಗಲಿ ಎಂದು ಘೋಷಣೆ ಕೂಗಲಾಯಿತು. ಪುರಂತರು ಭಾಗಮ್ಮ ಜಯ ಘೋಷಣೆಯೊಂದಿಗೆ ಹೆಜ್ಜೆ ಹಾಕುತ್ತಾ ಮೆರವಣಿಗೆ ಸಾಗಿತು.
ಪ್ರಮುಖರಾದ ಜಗನ್ನಾಥ ಪಾಟೀಲ್, ಸುಬ್ಬಣ್ಣ, ರಾಜುಕುಮಾರ ಪಾಟೀಲ್, ರವಿ ಸ್ವಾಮಿ, ವೀರಯ್ಯ ಸ್ವಾಮಿ, ರಾಜುಕುಮಾರ ಸ್ವಾಮಿ, ಪ್ರಭುಸ್ವಾಮಿ ಬೀದರ್, ಸುನೀತಾ, ಕವಿತಾ, ರೇಣುಕಾ, ಸರಸ್ವತಿ, ರೇವಣಯ್ಯ ಮಠಪತಿ ಇದ್ದರು.