ಸಂಭ್ರಮದ ತಂದ ಮಳೆರಾಯ

1001686947
Published on

ಹೊಳೆನರಸೀಪುರ: ಮಳೆ ಇಲ್ಲದೆ ಒಣಗುತ್ತಿದ್ದ ಬೆಳಗೆ ಕಳೆದ ಒಂದು ವಾರದಿಂದ ಹದವಾಗಿ ಬೀಳುತ್ತಿರುವ ಮಳೆಯಿಂದ ಬೆಳೆಯಲ್ಲ ಹಚ್ಚ ಹಸಿರಿನಿಂದ ನಳನಳಿಸುತ್ತಿವೆ.

ತಾಲೂಕಿನಾದ್ಯಂತ ಚಿತ್ತ ಮಳೆ ಹಗಲು, ರಾತ್ರಿ ಆರ್ಭಟಿಸುತ್ತಿದೆ. ಪಟ್ಟಣದಲ್ಲಿ ರಾತ್ರಿ ಸುಮಾರು ಒಂದು ಗಂಟೆಯ ತನಕ ಜೋರು ಮಳೆ ಸುರಿದು ನಾಗರಿಕರಿಗೆ ಚಳಿಯ ಪ್ರಭಾವ ಹೆಚ್ಚಿಸಿತು.

ತಾಲೂಕಿನ ಕಸಬಾ, ಹಳ್ಳಿ ಮೈಸೂರು ಮತ್ತು ಹಳೆಕೋಟೆ ಹೋಬಳಿಗಳ ರೈತರು ಮಳೆ ಇಲ್ಲದೆ ಕಂಗಾಲಾಗಿದ್ದರು. ಭೂಮಿಗೆ ಬಿತ್ತಿದ ಬೆಳೆಯಲ್ಲ ನೆಲಕಚ್ಚುವ ಹಂತ ತಲುಪಿದ್ದವು. ನೀರಾವರಿ ಸೌಲಭ್ಯ ಇರುವ ರೈತರು ತಮ್ಮ ಬೆಳೆ ರಕ್ಷಿಸಿಕೊಂಡಿದ್ದರು. ಈಗ ಮಳೆರಾಯನ ಕೃಪಾಕಟಾಕ್ಷ ರೈತರಿಗೆ ವರದಾನವಾಗಿದೆ. ರಾಗಿ, ದ್ವಿದಳ ಧಾನ್ಯ ಹುರುಳಿ, ಅವರೆ, ಮೆಕ್ಕೆಜೋಳ, ಭತ್ತ ಹಾಗೂ ಹೂವು, ತರಕಾರಿ ಬೆಳೆಗಳಿಗೆ ಮಳೆರಾಯನ ಸಿಂಚನದಿಂದ ಹಸಿರಿನ ಚಿಗುರೊಡೆದು ಪ್ರಕೃತಿಗೆ ಕಳೆ ಬಂದಿದೆ. ಒಟ್ಟಾರೆ ದೀಪಾವಳಿ ಹಬ್ಬದ ಆಚರಣೆಗೆ ಸಂಭ್ರಮದಲ್ಲಿರುವ ನಾಗರಿಕರಿಗೆ ಮಳೆರಾಯನಿಂದ ದುಪ್ಪಟ್ಟು ದೀಪ ಬೆಳಗುವ ಅವಕಾಶ ಸಂತಸ ತಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net