ಸಂಭ್ರಮದ ಜಾತ್ರಾ ಮಹೋತ್ಸವ

28Blh8
Published on

ಬೈಲಹೊಂಗಲ: ಪಟ್ಟಣದ ಜವಳಿ ಕೂಟದಲ್ಲಿರುವ ವಿಠ್ಠಲ, ರುಕ್ಮೀಣಿ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ಸಂತ ಶಿರೋಮಣಿ ನಾಮದೇವ ಮಹಾರಾಜರ 672ನೇ ಪುಣ್ಯತಿಥಿ ಸಮಾರಂಭ ಗುರುವಾರ ಸಂಭ್ರಮದಿಂದ ಜರುಗಿತು.

ಪೋತಿ ಸ್ಥಾಪನೆ, ಕಾಕಡ ಆರತಿ, ವಿಶೇಷ ಪೂಜೆ, ಪ್ರವಚನ, ಕೀರ್ತನೆಯೊಂದಿಗೆ ಪ್ರಾರಂಭಗೊಂಡು ವಿಠ್ಠಲ-ರುಕ್ಮೀಣಿ ಭಾವಚಿತ್ರದ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವ ಗೊಂಬಿಗುಡಿ ದೇವಸ್ಥಾನ, ಕೊಪ್ಪದ ಗಲ್ಲಿ, ಮಾರುತಿ ದೇವಸ್ಥಾನ, ಕೇಂದ್ರ ಬಸ್ ನಿಲ್ದಾಣ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಸಾಗಿ ದೇವಸ್ಥಾನದಲ್ಲಿ ಸಮರೋಪಗೊಂಡಿತು.

ನಾಮದೇವ ಶಿಂಪಿ ಸಮಾಜದ ಅಧ್ಯಕ್ಷ ಅಣ್ಣಪ್ಪ ಜೊಂಜಾಳೆ, ನಾಮದೇವ ಮಿತ್ರ ಮಂಡಳಿ ಅಧ್ಯಕ್ಷ ಸುಹಾಸ ಬೋಗಾಂಳೆ, ಸುರೇಶ ಕಾಮಕರ, ಅಶೋಕ ಮಿರಜಕರ, ಮನೋಹರ ಬೋಗಾಂಳೆ, ಜಗದೀಶ ಕೋರ್ಪಡೆ, ವಿಜಯಕುಮಾರ ಕೋಳೆಕರ, ದೀಪಕ ಬುಲಬುಲೆ, ವಿಠ್ಠಲ ಜೊಂಜಾಳೆ, ಕೃಷ್ಣ ಭಸ್ಮೆ, ರಾಜು ಹೋಮಕರ, ಪುಂಡಲೀಕ ಖಟಾವಕರ್, ನಾಗಪ್ಪ ರೇಣಕೆ, ಗಂಗಾಧರ ಬೋಗಾಂಳೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net