

ಗೋಕಾಕ: ನಗರದಲ್ಲಿ ಜೂ.30ರಿಂದ ಜು.8ರ ವರೆಗೆ ನಡೆಯಲಿರುವ ಗ್ರಾಮ ದೇವತೆಯರ ಜಾತ್ರೆ ಹಿನ್ನೆಲೆಯಲ್ಲಿ ಶ್ರೀ ಗ್ರಾಮ ದೇವತೆಯರನ್ನು ಬಣ್ಣಕ್ಕೆ ಕಳುಹಿಸುವ ಕಾರ್ಯಕ್ರಮಕ್ಕೆ ವಿಶೇಷ ಪೂಜೆ ಸಲ್ಲಿಸಿ ಶಾಸಕ, ಜಾತ್ರಾ ಕಮಿಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಚಾಲನೆ ನೀಡಿದರು.
ಸ್ಥಳೀಯ ಶ್ರೀ ದ್ಯಾಮವ್ವ ದೇವಿ ದೇವಸ್ಥಾನದಿಂದ ಜೀನಗಾರ ಮನೆಯವರೆಗೆ ಶ್ರೀ ಗ್ರಾಮದೇವಿಯರನ್ನು ಅರಿಶಿಣದ ಭಂಡಾರ ಎರಚುವ ಮೂಲಕ ವಿವಿಧ ವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ, ಯುವನಾಯಕ ಸರ್ವೋತ್ತಮ ಜಾರಕಿಹೊಳಿ, ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಮುಖಂಡ ಅಶೋಕ ಪೂಜಾರಿ, ಜಾತ್ರಾ ಕಮಿಟಿಯ ಪ್ರಭಾಕರ ಚೌವ್ಹಾಣ, ಅಶೋಕ ಹೆಗ್ಗಣ್ಣವರ, ಅಡಿವೆಪ್ಪ ಕಿತ್ತೂರು, ನಿರಂಜನ ಬನ್ನಿಶೆಟ್ಟಿ, ಸಾಗೀರ ಕೋತವಾಲ, ದೇವರಾಜ ಪಾಟೀಲ, ಅರ್ಜುನ ಪವಾರ, ದೇಶಪಾಂಡೆ ಇತರರಿದ್ದರು.