ಸಂಭ್ರಮದ ಗುತ್ತಿಬಸವೇಶ್ವರ ಜಾತ್ರೋತ್ಸವ

11 kem 3
ಕೆಂಭಾವಿ ಬಳಿಯ ಗುತ್ತಿಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ನಡೆದ ಜಾತ್ರೆಯಲ್ಲಿ ನಂದಿಕೋಲು ಮೆರವಣಿಗೆ ನೋಡಲು ಮುಗಿಬಿದ್ದ ಜನತೆ.
Published on

ಕೆಂಭಾವಿ: ಯಕ್ತಾಪುರ ಗ್ರಾಮದ ಗುತ್ತಿಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಶ್ರಾವಣ ಮಾಸ ಕಡೆಯ ಸೋಮವಾರ ಅದ್ದೂರಿಯಾಗಿ ಜರುಗಿತು.

ಕರ್ನಾಟಕ ಮಾತ್ರವಲ್ಲದೆ ದೇಶದ ಅನೇಕ ರಾಜ್ಯಗಳಲ್ಲಿ ಗುತ್ತಿಬಸವಣ್ಣನ ಭಕ್ತರಿದ್ದು, ಅವರೆಲ್ಲರೂ ಜಾತ್ರೆಗೆ ಬರುವುದು ವಿಶೇಷ. ಬೆಳಗ್ಗೆಯಿಂದ ಸುತ್ತಲಿನ ಗ್ರಾಮಗಳಿಂದ ಭಕ್ತರು ಗುತ್ತಿ ಬಸವೇಶ್ವರರ ದರ್ಶನ ಪಡೆದು ಹರಕೆ ತೀರಿಸಿದರು.

ಸಂಪ್ರದಾಯದಂತೆ ನಂದಿಕೋಲ ಮೆರವಣಿಗೆ ನಡೆಯಿತು. ನಂತರ ರುದ್ರಾಭಿಷೇಕ, ಬಿಲ್ವಾರ್ಚನೆ, ನಾಮ ಸಂಕೀರ್ತನೆ ಸೇರಿ ಹಲವು ಧಾರ್ಮಿಕ ಕಾರ‍್ಯಕ್ರಮ ಜರುಗಿದವು. ಶ್ರಾವಣ ಮಾಸದ ವ್ರತ ಆಚರಣೆಯಲ್ಲಿದ್ದ ಭಕ್ತರು ವ್ರತ ಮುಕ್ತಾಯಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net