ಬಳ್ಳಾರಿ : ನಗರ ಸೇರಿದಂತೆ ಜಿಲ್ಲಾದ್ಯಂತ ಗಣೇಶ ಚತುರ್ಥಿ ಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಜಿಲ್ಲೆಯ ವಿವಿಧಡೆ ಚಿಕ್ಕ ಗಾತ್ರದ, ಅಳೆತ್ತರದ ಮೂರ್ತಿಗಳನ್ನು ಪ್ರತಿಷ್ಟಾಪಿಸಲಾಗಿದೆ. ಪ್ರತಿಷ್ಟಾಪನೆಗೆ ಮುನ್ನ ಹೋಮ, ಹವನ ಮಾಡಲಾಯಿತು. ಗಣಪತಿ ಬಪ್ಪ ಮೋರಿಯಾ ಘೋಷಣೆಗಳು ಕೇಳಿ ಬಂದವು. ನೈವೇದ್ಯಕ್ಕೆ ಕಡಬು, ಲಾಡು, ಕರ್ಚಿಕಾಯಿ, ಹೋಳಿಗೆ ತಯಾರಿಸಿ ಅರ್ಪಿಸಲಾಯಿತು.
ವಿವಿಧ ಭಂಗಿಯ ಮೂರ್ತಿಗಳು : ಗಣೇಶೋತ್ಸವ ಅಂಗವಾಗಿ ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಂಗಿಯ ಮೂರ್ತಿಗಳನ್ನು ಪ್ರತಿಷ್ಟಾಪಿಸಲಾಗಿದೆ. ಒಂದೇ ಬಡಾವಣೆಯ ಮೂರ್ನಾಲ್ಕು ಕಡೆ ಮೂರ್ತಿ ಪ್ರತಿ ಪ್ರತಿಷ್ಟಾಪಿಸಲಾಗಿದೆ. ಹೂಗಳಿಂದ, ಆಲಂಕಾರ, ಮಾಡಲಾಗಿದೆ. ಕೆಲವು ಬಡಾವಣೆಗಳಲ್ಲಿ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕರ ಮಾಡಿದ್ದು, ಸಾರ್ವಜನಿಕರನ್ನು ಸೆಳೆಯುತ್ತಿದೆ. ಮಂತ್ರಾಲಯದ ರಾಘವೇಂದ್ರ, ಆಯೋಧ್ಯೆಯ ಗಣಪತಿ, ನವಿಲು ಗಣಪತಿ, ಶ್ರೀರಾಮನ ಗಣಪತಿ, ಪಾರ್ವತಿ ಪರಮೇಶ್ವರ ಗಣಪ ಸೇರಿದಂತೆ ವಿವಿಧ ರೀತಿಯ ಗಣೇಶ ಗಳನ್ನು ಪ್ರತಿಷ್ಟಾಪಿಸಲಾಗಿದೆ. ಬೆಳ್ಳಗೆ ಮತ್ತು ಸಂಜೆ ಪೂಜೆ ಮಾಡಿ ಮಹಾ ಮಂಗಳಾರತಿ ನಂತರ ಪ್ರಸಾದ ವಿತರಿಸಲಾಯಿತು. ಯುವಕರು ತಮ್ಮ ವಾರ್ಡ ಗಳಲ್ಲಿ ಟೆಂಟ್ ನಿರ್ಮಿಸಿ , ಮೆರವಣಿಗೆ ಮೂಲಕ ಗಣೇಶ ಮೂರ್ತಿ ತಂದು ಪ್ರತಿಷ್ಟಾಪಿಸಿದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ, ರಾತ್ರಿ ವೇಳೆ ಸಂಗೀತ, ಭಜನೆ ಕಾರ್ಯಕ್ರಮಗಳು ಜರುಗಿದವು.