ಸಂಭ್ರಮದ ಕ್ರಿಸ್‌ಮಸ್ ಆಚರಣೆ

25 yelandur 01
Published on

ಯಳಂದೂರು: ಸಮೀಪದ ಸಂತೆಮರಹಳ್ಳಿ ಹಾಗೂ ತಾಲೂಕಿನ ಸುತ್ತ್ತಲ ಗ್ರಾಮಗಳಲ್ಲಿ ಬುಧವಾರ ಕ್ರಿಸ್‌ಮಸ್ ಹಬ್ಬವನ್ನು ಕ್ರಿಶ್ಚಿಯನ್ನರು ಸಡಗರದಿಂದ ಆಚರಿಸಿದರು.

ಸಂತೆಮರಹಳ್ಳಿ ಹೋಬಳಿಯ ದೇಶವಳ್ಳಿ, ನಾಗವಳ್ಳಿ, ಮಂಗಲ ಗ್ರಾಮಗಳಲ್ಲಿರುವ ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಗ್ಗೆ ವಿಶೇಷ ಪ್ರಾರ್ಥನೆಗಳು ನಡೆದವು. ಚರ್ಚ್‌ಗಳಲ್ಲಿ ಯೇಸು ಜನಿಸಿದ ದಿನವನ್ನು ನೆನಪಿಸುವ ಗೋದಳಿಗಳನ್ನು ನಿರ್ಮಿಸಲಾಗಿತ್ತು.

ಕ್ರಿಶ್ಚಿಯನ್ನರು ಮನೆಗಳ ಮುಂದೆ ಕ್ರಿಸ್‌ಮಸ್ ಟ್ರೀ ನಿರ್ಮಿಸಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದರು. ಕೆಲವರು ಸಾಂತಾಕ್ಲಾಸ್ ವೇಷಭೂಷಣಗಳೊಂದಿಗೆ ಮಕ್ಕಳಿಗೆ ಉಡುಗೊರೆ ನೀಡಿದರು. ಸಮೀಪದ ದೇಶವಳ್ಳಿ ಗ್ರಾಮದ ಸಿಎಸ್‌ಐ ಸುಶಾಂತಿ ಚರ್ಚ್‌ನಲ್ಲಿ ಫಾದರ್ ರೆವರೆಂಡ್‌ಪುಟ್ಟರಾಜು ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಿ ಗೆದ್ದವರಿಗೆ ಬಹುಮಾನ ವಿತರಿಸಲಾಯಿತು. ಗ್ರಾಪಂ ಸದಸ್ಯ ಎಚ್.ಎನ್.ಶಿವಕುಮಾರ್, ಡಿ.ಸಿ.ಸುರೇಂದ್ರ, ಶಿವಮಲ್ಲು, ಡಿ.ಸಿ.ಆನಂದ, ಜೇಮ್ಸ್, ಸುರೇಶ್, ಡಾ.ಸುಪ್ರಿಯಾ, ರಾಣಿ ಸತ್ಯಪ್ರಕಾಶ್ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net