ಸಂಭ್ರಮದ ಕೊಟಬಾಗಿ ರುದ್ರಸ್ವಾಮಿ ರಥೋತ್ಸವ

14 upbr 2- kotabagi jatre 2
Published on

ಉಪ್ಪಿನಬೆಟಗೇರಿ: ಧಾರವಾಡ ತಾಲೂಕಿನ ಕೊಟಬಾಗಿ ಗ್ರಾಮದಲ್ಲಿ ಶ್ರೀ ರುದ್ರಸ್ವಾಮಿ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.

ಸಂಜೆ ನಾಲ್ಕು ಗಂಟೆಗೆ ದೇವಸ್ಥಾನದಿಂದ ಆರಂಭವಾದ ರಥೋತ್ಸವ ಉಪ್ಪಿನಬೆಟಗೇರಿ- ತಡಕೋಡ ಪ್ರಮುಖ ರಸ್ತೆಯಲ್ಲಿರುವ ಪಾದಗಟ್ಟೆಯವರೆಗೆ ಬಂದಿತು. ಶ್ರೀ ರುದ್ರಸ್ವಾಮಿ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವಕ್ಕೆ ಗರಗ ಮಡಿವಾಳೇಶ್ವರ ಮಠದ ಶ್ರೀ ಚನ್ನಬಸವ ಮಹಾಸ್ವಾಮೀಜಿ ಚಾಲನೆ ನೀಡಿದರು. ರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಕಲ್ಲೂರ, ತಡಕೋಡ, ಜಿರಿಗಿವಾಡ, ಲೋಕೂರ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ವಿವಿಧ ಭಜನಾ ಮಂಡಳಿಗಳಿಂದ ಶಿವ ಭಜನೆ, ಸೇರಿ ಸಕಲ ವಾದ್ಯ ಮೇಳಗಳು ಹಾಗೂ ಶ್ರೀಮಠದ ಸೇವಾ ಸಮಿತಿಯ ಸದಸ್ಯರ ಹಷೋದ್ಗಾರದ ಮಧ್ಯೆ ರಥೋತ್ಸವ ಕಳೆಗಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net