ಸಂಬಂಧಿಕರ ಮನೆಗೆ ಹೋಗಿದ್ದವನ ಶವ ಕೆರೆಯಲ್ಲಿ ಪತ್ತೆ

Published on

ಗುಬ್ಬಿ: ಸಂಬಂಧಿಕರ ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಶನಿವಾರ ಮನೆಯಿಂದ ಹೋಗಿದ್ದ ಕಸಬಾ ಹೋಬಳಿ ಜಿ ಹೊಸಹಳ್ಳಿಯ ಪಾಂಡುರಂಗಯ್ಯ (38) ಅವರು ಸೋಮವಾರ ಗ್ರಾಮದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶನಿವಾರ ರಾತ್ರಿಯಿಂದ ದೂರವಾಣಿ ಸಂಪರ್ಕಕ್ಕೂ ಸಿಗದಿದ್ದರಿಂದ ಆತಂಕಗೊಂಡ ಕುಟುಂಬಸ್ಥರು ಭಾನುವಾರ ಸಂಬಂಧಿಕರ ಮನೆಗಳಿಗೆ ಕರೆ ಮಾಡಿ ವಿಚಾರಿಸಿದ್ದರೂ ಸುಳಿವು ಸಿಕ್ಕಿರಲಿಲ್ಲ. ಸೋಮವಾರ ಬೆಳಗ್ಗೆ ಗ್ರಾಮಸ್ಥರು ಕೆರೆಯಲ್ಲಿ ಶವ ತೇಲುತ್ತಿರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶವವನ್ನು ಹೊರತೆಗೆದಾಗ ಪಾಂಡುರಂಗಯ್ಯ ಮೃತಪಟ್ಟಿರುವುದು ತಿಳಿದಿದೆ. ಸಾಲಬಾಧೆಯಿಂದ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಮೃತರಿಗೆ ಪತ್ನಿ, ತಂದೆ&ತಾಯಿ ಇದ್ದಾರೆ. ಗುಬ್ಬಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬುಕ್ಕಾಪಟ್ಟಣ ದೊಡ್ಡ ಕೆರೆಯಲ್ಲಿ ಕಾಲು ಜಾರಿ ಬಿದ್ದು ಸಾವು

ಬುಕ್ಕಾಪಟ್ಟಣ; ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿ ಹೊಸಹಳ್ಳಿಯ ಬುಕ್ಕಾಪಟ್ಟಣ ದೊಡ್ಡ ಕೆರೆಯಲ್ಲಿ ದನಗಳಿಗೆ ನೀರು ಕುಡಿಸಲು ಹೋದ ಯುವಕ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾನೆ. ಸಾಳಾಪುರ ನಿವಾಸಿ ಮೋಹನ್​ ಕುಮಾರ್​ (21) ಮೃತ. ಮಂಗಳವಾರ ಮಧ್ಯಾಹ್ನ ದನಗಳನ್ನು ಮೇಯಿಸಿಕೊಂಡು ಬಂದು ಬುಕ್ಕಾಪಟ್ಟಣ ದೊಡ್ಡ ಕೆರೆಯಲ್ಲಿ ನೀರು ಕುಡಿಸಲು ಹೋಗಿದ್ದಾಗ ಅವಡ ಸಂಭವಿಸಿದೆ. ಶಿರಾ ನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net