ಸಂಪೂರ್ಣ ಆನ್​ಲೈನ್ ಮಾಡಿರಿ

suresh kiresur
Published on

ಹುಬ್ಬಳ್ಳಿ: ಕಟ್ಟಡ ನಿರ್ವಣಕ್ಕೆ ಪರವಾನಿಗೆ ನೀಡುವ ಎಲ್ಲ ಹಂತವನ್ನು ಆನ್​ಲೈನ್ ಮಾಡಬೇಕು ಎಂದು ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮಾಜಿ ಅಧ್ಯಕ್ಷ ಸುರೇಶ ಕಿರೇಸೂರ, ಹು-ಧಾ ಮಹಾನಗರ ಪಾಲಿಕೆಯನ್ನು ಆಗ್ರಹಿಸಿದ್ದಾರೆ.

ಕಟ್ಟಡ ನಿರ್ಮಾಣ ಪರವಾನಿಗೆಗೆ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಅಧಿಕಾರಿಗಳು ಸ್ಥಳ ಪರಿಶೀಲನೆ ಹಾಗೂ ಪರವಾನಿಗೆ ಶುಲ್ಕ ತುಂಬಿಸಿಕೊಳ್ಳಲು ಅಲೆದಾಡಿಸುತ್ತಾರೆ. ಪಾಲಿಕೆಯ ಕೆಲವು ವಲಯ ಕಚೇರಿಗಳಲ್ಲಿ ಸರಿಯಾದ ಮಾಹಿತಿ ಇಲ್ಲದ ಇಂಜಿನಿಯರ್​ಗಳು ಇದ್ದಾರೆ. ಇದರಿಂದ ಸಾರ್ವಜನಿಕರು ತೊಂದರೆ ಪಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಆನ್​ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಬಳಿಕ ಎಲ್ಲವೂ ಆನ್​ಲೈನ್ ಮೂಲಕವೇ ನಡೆಯಬೇಕು. ಇದರಿಂದ ಮಧ್ಯವರ್ತಿಗಳ ಹಾವಳಿ ಹಾಗೂ ಪದೇ ಪದೆ ಕಚೇರಿಗೆ ಸಾರ್ವಜನಿಕರು ಅಲೆದಾಡುವುದು ತಪ್ಪುತ್ತದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net