

ಕಲಬುರಗಿ: ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಡಿ.ಸುಧಾಕರ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಿ ವಿಪ್ರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಕೆಲ ಸಮುದಾಯದ ಬಗ್ಗೆ ದ್ವೇಷ ಹೊಂದಿರುವವರು ಸಚಿವ ಸಂಪುಟದಲ್ಲಿ ಮುಂದುವರಿಯಲು ಅರ್ಹರಲ್ಲ. ಬೇಜವಾಬ್ದಾರಿ ವರ್ತನೆ, ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಬಲವಾಗಿ ಖಂಡಿಸುತ್ತೇವೆ. ಜಾತಿ ನಿಂದನೆ ಮಾಡಿರುವ ಡಿ.ಸುಧಾಕರ್ ಅವರನ್ನು ಸಂಪುಟದಿAದ ತಕ್ಷಣ ಹೊರಹಾಕಬೇಕು ಎಂದು ಆಗ್ರಹಿಸಿದರು.
ಸಂಚಾಲಕ ವೀರೇಶ ಕುಲಕರ್ಣಿ, ಪ್ರಮುಖರಾದ ರವಿ ಲಾತೂರಕರ್, ಹೃಷಿಕೇಶ ಚೌಡಾಪುರಕರ್, ಗೋಪಾಲಕೃಷ್ಣ ಸರಡಗಿ, ವಿಶ್ವಾಸ ಮೊಗೇಕರ್, ಗುರುರಾಜ ಭರತನೂರ, ಬಾಬುರಾವ ಬಟ್ಟರಕಿ, ರಾಮರಾವ ಕುಲಕರ್ಣಿ, ಪದ್ಮಾಕರ ಕುಲಕರ್ಣಿ, ಸತೀಶ ಕುಲಕರ್ಣಿ, ಅರವಿಂದ ನವಲಿ, ಶ್ರೀರಂಗ ಕರಲಗಿಕರ್, ಸದಾಶಿವ ಕುಲಕರ್ಣಿ, ಅಭಿಷೇಕ ಕುಲಕರ್ಣಿ, ಲಕ್ಷಿö್ಮÃಕಾಂತ ಕುಲಕರ್ಣಿ, ವಿಜಯರಾವ ಕುಲಕರ್ಣಿ ಇತರರಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಮನವಿಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.