ಸಂಪುಟದಲ್ಲಿ ಜಿಲ್ಲೆಗೆ ಸಿಗದ ಮಾನ್ಯತೆ

Published on

ಬಳ್ಳಾರಿ : ಜಿಲ್ಲೆಯಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಅನುಮೋದನೆ ದೊರೆಯುತ್ತಿದೆ ಎಂಬ ಆಶಾಭಾವನೆ ಮತ್ತೋಮ್ಮೆ ಕಮರಿದೆ.
ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಜಿಲ್ಲೆಯ ಪ್ರಮುಖ ಅಭಿವೃದ್ಧಿ ಕಾಮಗಾರಿಗಳಿಗೆ ಅನುಮೋದನೆ ದೊರೆತಿಲ್ಲ. ಅಲ್ಲದೆ, ಕಳೆದ ಕೆಲ ವರ್ಷಗಳಿಂದ ವಿಮಾನ ನಿಲ್ದಾಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ರಿಂಗ್ ರಸ್ತೆ, ಚಿಲ್ಲಿ ಮಾರುಕಟ್ಟೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚುನಾವಣೆ ವೇಳೆ ಘೋಷಿಸಿದ್ದ ಜೀನ್ಸ್ ಅಪೆರೆಲ್ ಪಾರ್ಕ್ ಸೇರಿದಂತೆ ವಿವಿಧ ಕಾಮಗಾರಿಗಳ ಸೇರಿದಂತೆ ಯಾವ ವಿಷಯಗಳ ಬಗ್ಗೆಯೂ ಸಂಪುಟ ಸಭೆಯಲ್ಲಿ ಪರಿಗಣಿಸಿಲ್ಲ. ಬಿ. ಎಸ್. ಯಡಿಯೂರಪ್ಪ ಸಿಎಂಯಾಗಿದ್ದ ವೇಳೆ ಜಿಲ್ಲೆಯಲ್ಲಿ ಹೊಸ ತಾಲೂಕುಗಳನ್ನು ಘೋಷಣೆ ಮಾಡಿದ್ದರು, ಈ ತಾಲೂಕುಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ. ಜಿಲ್ಲಾದ್ಯಂತ ಕುಡಿವ ನೀರು ಸರಬರಾಜು, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ, ಸರ್ಕಾರಿ ಆಸ್ಪತ್ರೆಗಳ ಪುನಶ್ಚೇತನ, ಮೂಲಸೌಕರ್ಯ ಅಳವಡಿಕೆಗೂ ಒತ್ತು ನೀಡಲಾಗಿಲ್ಲ ಎಂಬುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.ಸಿಕ್ಕಿದ್ದು : ಕೇವಲ ವೈದ್ಯಕೀಯ ಶಿಕ್ಷಣ ಇಲಾಖೆಯ ರಾಜ್ಯದ ವೈದ್ಯಕೀಯ ಕಾಲೇಜುಗಳಿಗೆ ಎಂಆರ್‌ಐ ಸ್ಕಾೃನ್, ವಕ ಬೋರ್ಡ್‌ನಿಂದ ಮಹಿಳಾ ಪದವಿ ಪೂರ್ವ ಕಾಲೇಜು ಸ್ಥಾಪನೆ ಹಾಗೂ ಬಳ್ಳಾರಿ ಬೆಟ್ಟಕ್ಕೆ ರೂಪ್ ವೇ ಹಾಕುವ ಮಾತ್ರ ಪರಿಗಣಿಸಲಾಗಿದೆ. ಅವಳಿ ಜಿಲ್ಲೆಯಲ್ಲಿ ಅತ್ಯಧಿಕ ಶಾಸಕರು ಹಾಗೂ ಸಂಸದರು ಕಾಂಗ್ರೆಸ್ ಪಕ್ಷದವರು ಆಗಿದ್ದಾರೆ. ಆದರೆ, ಯಾವ ಶಾಸಕರು ಜಿಲ್ಲೆಯ ಕಾಮಗಾರಿಗಳಿಗೆ ಅನುದಾನ ಪಡೆದಿಲ್ಲ. ಆದರೆ, ಜಿಲ್ಲೆಯ ಶಾಸಕರು ಪ್ರಮುಖ ವಿಷಯಗಳ ಬಗ್ಗೆ ಸಂಪುಟದಲ್ಲಿ ಪ್ರಸ್ತಾಪಿಸದೆ ಮೌನ ವಹಿಸಿರುವುದು ಆಶ್ಚರ್ಯ ಮೂಡಿಸಿದೆ. ಕಲ್ಯಾಣ ಕರ್ನಾಟಕದ ಕಲಬುರಗಿಯಲ್ಲಿ ಸಚಿವ ಸಂಪುಟ ನಡೆಸಿ ಮತ್ತೋಮ್ಮೆ ಜಿಲ್ಲೆಯನ್ನು ಕಡೆಗಣಿಸಿದೆ. ಬೀದರ್ ಮತ್ತು ರಾಯಚೂರು ಜಿಲ್ಲೆಗಳಿಗೆ ಬರಪೂರ ದೊರೆತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net