ಸಂಪುಟದ ಮುಂದೆ 5300 ಕೋಟಿ ರೂ.ಅನುದಾನ ಬಿಡುಗಡೆ ವಿಚಾರ

167ca08d-733f-4ca7-9817-46a5c2277dda--01
Published on


ಚಿತ್ರದುರ್ಗ: ಸಂಪುಟ ಸಭೆ ಬಳಿಕ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ ಬಿಡುಗಡೆಯಾಗಲಿದೆ ಎಂದು ಕೇಂದ್ರ ಸಚಿವ ಎ.ನಾ ರಾಯಣ ಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸು ವುದಾಗಿ ಹೇಳಿ ಇದಕ್ಕಾಗಿ 5300 ಕೋಟಿ ರೂ.ಅನುದಾನವನ್ನೂ ಬಜೆಟ್‌ನಲ್ಲಿ ಮೀಸಲಿಟ್ಟಿತ್ತು. ಆದರೆ 2012ರಿಂದ ದೇಶದಲ್ಲಿ ಯಾವುದೇ ನೀರಾವರಿ ಯೋಜನೆಯನ್ನೂ ರಾಷ್ಟ್ರೀಯ ಯೋಜನೆ ಎಂದು ಘೋಷಿಸದ ಕಾರಣದಿಂದಾಗಿ,ರಾಜ್ಯಸರ್ಕಾರದ ಒಪ್ಪಿಗೆ ಯೊಂದಿಗೆ ಪಿಎಂ ಕೆಎಸ್‌ವೈ(ಎಐಬಿಪಿ)/ರಾಷ್ಟ್ರೀಯ ಯೋಜನೆಯಡಿ ಅನುದಾನ ಬಿಡುಗಡೆ ಕೋರಿ ಜಲ ಸಂಪನ್ಮೂಲ ಸಚಿವಾಲಯಕ್ಕೆ ಈಗಾಗಲೇ ಮನವಿ ಮಾಡಲಾಗಿದೆ. ಅನುದಾನ ಬಿಡುಗಡೆ ಕಡತ ಈಗ ಸಂಪುಟದ ಮುಂದಿದೆ ಎಂದರು.
‘ಭದ್ರಾ’ಕಾಮಗಾರಿಗೆ ಸಂಬಂಧಿಸಿದಂತೆ 1900 ಕೋಟಿ ರೂ.ಬಿಲ್ ಪಾವತಿ ಬಾಕಿ ಇದೆ. ಇಷ್ಟೊಂದು ಮೊತ್ತದ ಬಾಕಿಯಿಂದ ಕಾಮ ಗಾರಿ ಸ್ಥಗಿತಗೊಳ್ಳುವ ಆತಂಕವಿದೆ ಆದರೂ ಸದ್ಯಕ್ಕೆ ಕಾಮಗಾರಿಗಳು ಚಾಲ್ತಿಯಲ್ಲಿವೆ. ಕೇಂದ್ರದಿಂದ ಶೀಘ್ರ ಅನುದಾನವೂ ಬಿಡುಗಡೆಯಾ ಗಲಿದೆ. ಅಬ್ಬಿನಹೊಳೆ ಬಳಿ ಭೂ ಸ್ವಾಧೀನ ಸಮಸ್ಯೆ ಬಗೆಹರಿಸುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಹಿರಿಯೂರು ತಾಲೂಕು ವಿವಿ ಸಾಗಾರ ನಾಲಾ ಅಭಿವೃದ್ಧಿಯೊಂದಿಗೆ ಹನಿ ನೀರಾವರಿ ಮೂಲಕ 45 ಸಾವಿರ ಎಕರೆಗೆ ನೀರೊದಗಿಸು ವ ಎಡಿಬಿ ನೆರವಿನ,732 ಕೋಟಿ ರೂ.ವೆಚ್ಚದ ಯೋಜನೆಗೆ ಹಣಕಾಸು ಇಲಾಖೆ ಕ್ಲಿಯರೆನ್ಸ್ ದೊರೆತಿದೆ. ಪಾವಗಡ,ಚಳ್ಳಕೆರೆ ಹಾಗೂ ಮೊ ಳಕಾಲ್ಮೂರು ವಿಧಾನಸಭಾ ಕ್ಷೇತ್ರಗಳಿಗೆ ಕುಡಿವ ನೀರು ಪೂರೈಸುವ 2100 ಕೋಟಿ ರೂ.ವೆಚ್ಚದ ಕಾಮಗಾರಿ ಕಳೆದ 5 ವರ್ಷಗಳಿಂದ ನಡೆ ದಿದೆ. ಹೊಸಪೇಟೆ ಪಂಪಹೌಸ್ ಬಳಿ ಸಮಸ್ಯೆ ಕುರಿತಂತೆ ಸ್ಥಳ ಪರಿಶೀಲಿಸುವುದಾಗಿ ಹೇಳಿದರು.
ಸರ್ವಾಧಿಕಾರಿ ಧೋರಣೆ ಸಲ್ಲದು
ಗಣಿಬಾಧಿತ ಪ್ರದೇಶಾಭಿವೃದ್ಧಿ ಕಾರ‌್ಯಕ್ರಮದಡಿ ಚಿತ್ರದುರ್ಗ ಕೋಟೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಕಾರ‌್ಯದರ್ಶಿ ಆಮ್ಲಾನ್‌ಆದಿತ್ಯ ಬಿಸ್ವಾಸ್ ಅವರು ನನ್ನ ಇಷ್ಟ ಎಂದಿದ್ದಾರೆ. ನಾನು ಕೇಂದ್ರದ ಮಂತ್ರಿ,ಸಂವಿಧಾನದ ಆಶಯಗಳಿಗೆ ಪೂರಕ ವಾಗಿ ಅಧಿಕಾರಿಗಳು ಕೆಲಸ ಮಾಡಬೇಕು. ಅವರು ಸರ್ವಾಧಿಕಾರಿ ಅಲ್ಲವೆಂದು ಬಿಸ್ವಾಸ್ ವಿರುದ್ಧ ತೀವ್ರ ಅ ಸಮಾಧಾನ ವ್ಯಕ್ತಪಡಿಸಿದ ಸಚಿ ವರು,ತಮ್ಮ ಈ ಅಸಮಾಧಾನ ಕಾರಣವನ್ನು ಬಹಿರಂಗ ಪಡಿಸಲಿಲ್ಲ.
ಇಸ್ರೋ ಸಾಧನೆಗೆ ಹರ್ಷ
ಚಂದ್ರನ ಮೇಲೆ ವೀಕ್ರಮ್ ಲ್ಯಾಂಡರ್‌ನ್ನು ಸುರಕ್ಷಿತವಾಗಿ ಇಳಿಸಿದ ಇಸ್ರೋವಿಜ್ಞಾನಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ ಸಚಿವರು, ಜಿ ಲ್ಲೆ ಜನರ ಪರವಾಗಿ ಎಲ್ಲ ವಿಜ್ಞಾನಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು. ಭದ್ರಾ ಮೇಲ್ದಂಡೆ ಯೋಜನೆ ಸಿಇ ಶಿವಪ್ರಕಾಶ್ ಇದ್ದರು.

(ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net