ಸಂಪನ್ಮೂಲ ಕ್ರೋಢೀಕರಣಕ್ಕೆ ಮುಂದಾಗಿ

11-08-Shiva-2
ರಾಯಚೂರಿನ ಜೆಸಿ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಏಕರೂಪ ಉಪನಿಯಮ ಅಳವಡಿಕೆ ಕುರಿತು ತರಬೇತಿ ಕಾರ್ಯಕ್ರಮವನ್ನು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ ಪಾಟೀಲ್ ಉದ್ಘಾಟಿಸಿದರು. ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಶಾವಂತಗೇರಿ, ಸಹಕಾರ ಸಂಘಗಳ ಉಪ ನಿಬಂಧಕ ಎಂ.ಆರ್.ಮನೋಹರ, ಸಹಕಾರ ನಿಬಂಧಕ ಶೇಖ್ ಹುಸೇನ್, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಎನ್.ಭೀಮರೆಡ್ಡಿ, ಎಸ್.ಜಿ.ಕಲ್ಲಯ್ಯಸ್ವಾಮಿ ಇದ್ದರು.
Published on

ರಾಯಚೂರು: ಕೃಷಿ ಪತ್ತಿನ ಸಹಕಾರ ಸಂಘಗಳು ಕೇವಲ ಬೆಳೆ ಸಾಲ ಮತ್ತು ಜಮೀನು ಅಭಿವೃದ್ಧಿ ಸಾಲ ನೀಡುವುದಕ್ಕೆ ಮಾತ್ರ ಸಿಮೀತವಾಗಿದ್ದು, ಸಂಘಗಳು ಇನ್ನಿತರ ಮೂಲಗಳಿಂದ ಸಂಪನಮ್ಮೂಲ ಕ್ರೋಢೀಕರಣಕ್ಕೆ ಮುಂದಾಗಬೇಕು ಎಂದು ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ ಪಾಟೀಲ್ ಹೇಳಿದರು.
ಸ್ಥಳೀಯ ಜೆಸಿ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ಜಿಲ್ಲಾಸಹಕಾರ ಒಕ್ಕೂಟ, ಆರ್‌ಡಿಸಿಸಿ ಬ್ಯಾಂಕ್‌ನಿಂದ ಏಕರೂಪ ಉಪನಿಯಮಗಳ ಅಳವಡಿಕೆ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಏಕರೂಪ ಕಾನೂನುಗಳ ಜಾರಿಯಿಂದ ಸಹಕಾರ ಸಂಘಗಳು ಗ್ಯಾಸ್ ಏಜೆನ್ಸಿ, ಜನೌಷ ಅಂಗಡಿ ಆರಂಭ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ನಡೆಸುವ ಮೂಲಕ ಆರ್ಥಿಕವಾಗಿ ಸದೃಢವಾಗಬಹುದಾಗಿದೆ. ಈ ನಿಟ್ಟಿನಲ್ಲಿ ಸಂಘದ ಪದಾಕಾರಿಗಳು ಗಮನ ಹರಿಸಬೇಕು ಎಂದು ವಿಜಯಕುಮಾರ ಪಾಟೀಲ್ ಸಲಹೆ ನೀಡಿದರು.
ಹೊಸಪೇಟೆಯ ಸಹಕಾರ ಸಂಘಗಳ ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕ ಲಿಯಾಕತ್ ಅಲಿ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಏಕರೂಪ ಉಪನಿಯಮಗಳ ಅಳವಡಿಕೆಯಿಂದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣಸಹಕಾರ ಸಂಘ ನಿಯಮಿತ ಎಂದು ಬದಲಾಯಿಸಲಾಗುತ್ತಿದ್ದು, ವಿವಿಧೋದ್ದೇಶ ಎನ್ನುವ ಶಬ್ದ ಬಳಕೆಯಿಂದ ಸಂಘಗಳು ಪತ್ತಿನ ವ್ಯವಹಾರದ ಜತೆಗೆ ಇನ್ನಿತರ ಚಟುವಟಿಕೆಗಳನ್ನು ನಡೆಸಬಹುದಾಗಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಶಾವಂತಗೇರಿ ಮಾತನಾಡಿ, ಸಂಘಗಳು ಗ್ರಾಮೀಣ ಪ್ರದೇಶದಲ್ಲಿ ಗ್ಯಾಸ್ ಏಜೆನ್ಸಿ, ಜನೌಷ ಕೇಂದ್ರ ಆರಂಭಿಸಲು ಹೆಚ್ಚಿನ ಬಂಡವಾಳದ ಅವಶ್ಯಕತೆಯಿಲ್ಲ. ಈ ಬಗ್ಗೆ ಆಸಕ್ತಿಯಿರುವ ಸಂಘಗಳ ಪದಾಕಾರಿಗಳಿಗೆ ಒಕ್ಕೂಟ ಅದಕ್ಕೆ ಬೇಕಾದ ಮಾಹಿತಿ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರ ಸಂಘಗಳ ಉಪ ನಿಬಂಧಕ ಎಂ.ಆರ್.ಮನೋಹರ, ಸಹಕಾರ ನಿಬಂಧಕ ಶೇಖ್ ಹುಸೇನ್, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಎನ್.ಭೀಮರೆಡ್ಡಿ, ಎಸ್.ಜಿ.ಕಲ್ಲಯ್ಯಸ್ವಾಮಿ ಹಾಗೂ ಜಿಲ್ಲೆಯ ಕೃಷಿ ಪತ್ತಿನ ಸಹಕಾರ ಸಂಘಗಳ ಪದಾಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net