ಸಂಪತ್ತು ಗಳಿಸುವುದೇ ಬದುಕಾಗಬಾರದು

Oplus_131072
Oplus_131072
Published on

ಅಥಣಿ ಗ್ರಾಮೀಣ: ಬದುಕಲು ಸಂಪತ್ತು ಗಳಿಸಬೇಕು. ಸಂಪತ್ತು ಗಳಿಸುವುದೇ ಬದುಕಾಗಬಾರದು. ಭಾರತೀಯ ಸಂಸ್ಕಾರ, ಸಂಸ್ಕೃತಿ ಬೆಳೆಸುವ ಕಾರ್ಯ ಇಂದಿನ ಯುವ ಜನಾಂಗ ಮಾಡಬೇಕಿದೆ ಎಂದು ಸಾಹಿತಿ ಡಾ. ಅರ್ಚನಾ ಅಥಣಿ ಹೇಳಿದರು.

ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಕನ್ನಡ ಶಿಕ್ಷಕಿ ಡಾ. ಅರ್ಚನಾ ಅಥಣಿ ಈಚೆಗೆ ಸಿಂಗಾಪುರದ ಪ್ಲೂಮ್ ಸಭಾಂಗಣದಲ್ಲಿ ಜರುಗಿದ ೪೯ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾವು ರಚಿಸಿದ `ಅರಾವಳಿ ನರ್ಮದೆಯರ ನಾಡಿನಲ್ಲಿ' ಪ್ರವಾಸ ಕಥನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಸಹಕಾರ ಮನೋಭಾವ ಬೆಳೆಸಿಕೊಂಡಾಗ ಮಾನವೀಯತೆಗೆ ಒಂದು ಸಾರ್ಥಕತೆ ಲಭಿಸುತ್ತದೆ. ಇಂದು ಪುಸ್ತಕ ಬರೆಯುವವರು ಬಹಳಷ್ಟಿದ್ದಾರೆ. ಆದರೆ, ಓದುವವರ ಸಂಖ್ಯೆ ಗಣನೀಯ ಕಡಿಮೆಯಾಗುತ್ತಿದೆ. ಪ್ರತಿಯೊಬ್ಬರೂ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಅದರಿಂದ ಮನಸ್ಸಿಗೆ ಶಾಂತಿ, ಜ್ಞಾನ ಬೆಳೆಯುತ್ತದೆ. ಇಂದು ತಲೆ ತಗ್ಗಿಸಿ ಪುಸ್ತಕ ಓದಿದರೆ, ಮುಂದೊಂದು ದಿನ ತಲೆಯೆತ್ತಿ ಬದುಕಲು ಸಾಧ್ಯ ಎಂದು ತಿಳಿಸಿದರು.

ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಕರಾದ ಕೆ.ಪಿ.ಮಂಜುನಾಥ ಸಾಗರ, ಅನಿತಾ ಜಗದೀಶ, ಡಾ.ದೊಡ್ಡಪ್ಪ ಪೂಜಾರಿ, ಶ್ರೀನಿವಾಸ ನಾಯಕ, ನಾಗರಾಜ.ಕೆ. ಸೇರಿ ಅನೇಕರು ಕನ್ನಡ ನಾಡು ನುಡಿ ಬಗ್ಗೆ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net