ಸಂದೇಶಗಳ ಪಾಲನೆಯಿಂದ ಬದುಕಿನಲ್ಲಿ ನೆಮ್ಮದಿ

20,KHH-1P
Published on

ಕಾನಹೊಸಹಳ್ಳಿ: ತ್ರಿಪದಿಗಳ ಮೂಲಕ ಸಮಾಜದಲ್ಲಿ ಅಂಕುಡೊಂಕು ತಿದ್ದಿದ ಹಾಗೂ ಜೀವನಾನುಭಕ್ಕೆ ಬೇಕಾದ ಉತ್ತಮ ಸಂದೇಶ ನೀಡಿದ ಮಹಾನ್ ಜ್ಞಾನಿ ಸರ್ವಜ್ಞ ಎಂದು ಉಪ ತಹಸೀಲ್ದಾರ್ ಎಂ.ಚಂದ್ರುಮೋಹನ್ ತಿಳಿಸಿದರು.

ನಾಡಕಚೇರಿಯಲ್ಲಿ ಸರ್ವಜ್ಞ ಜಯಂತಿ ನಿಮಿತ್ತ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಗುರುವಾರ ಮಾತನಾಡಿದರು. ಸರ್ವಜ್ಞ ಅವರು ತ್ರಿಕಾಲ ಜ್ಞಾನಿಯಾಗಿದ್ದು, ಇಡೀ ನಾಡಿಗೆ ನೀಡಿದ ನೀತಿ ಮತ್ತು ಸಂದೇಶಗಳನ್ನು ಬದುಕಿನಲ್ಲಿ ಪಾಲನೆ ಮಾಡಿದರೆ ಜೀವನದಲ್ಲಿ ನೆಮ್ಮದಿ ಕಾಣಲು ಸಾಧ್ಯ . ಆಖಂಡ ಮನುಕುಲಕ್ಕೆ ಅನ್ವಯಿಸುವ ನಿಟ್ಟಿನಲ್ಲಿ ತ್ರಿಪದಿಗಳನ್ನು ರಚಿಸಿದ್ದಾರೆ. ತ್ರಿಪದಿಗಳು ಜನಸಾಮನ್ಯರಿಗೂ ಅರ್ಥವಾಗುತ್ತವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net