ಸಂತ್ರಸ್ಥ ಕುಟುಂಬಕ್ಕೆ ೪ ಲಕ್ಷ ರೂ. ಚೆಕ್ ವಿತರಣೆ

22 ckm 6
ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ ಅವರು ೨೦೨೨ರಲ್ಲಿ ಕೆರೆಯಲ್ಲಿ ಮುಳುಗಿ ತಾಯಿ ಮಗಳು ಮೃತಪಟ್ಟ ಪ್ರಕರಣಕ್ಕೆ ಸಂಬAಧಿಸಿದAತೆ ಮೃತರ ಕುಟುಂಬಸ್ಥರಿಗೆ ಪರಿಹಾರದ ಚೆಕ್ ವಿತರಣೆ ಮಾಡಿದರು. ಶಿವಕುಮಾರ್, ಅಮೀರ್ ಬೆಳವಾಡಿ, ಬಿ.ಎನ್.ನಾಗರಾಜ್, ಹರೀಶ್, ಶಿವಣ್ಣ, ಪರಮೇಶ್ವರಪ್ಪ, ಜಮೀರ್ ಮಾಚೇನಹಳ್ಳಿ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಬೆಳವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರಹಳ್ಳಿ ಗ್ರಾಮದಲ್ಲಿ ಜಾನುವಾರುಗಳಿಗೆ ಕೆರೆಯಲ್ಲಿ ನೀರು ಕುಡಿಸಲು ಹೋದ ಸಂದರ್ಭದಲ್ಲಿ ಶಿವಕುಮಾರ್ ಅವರ ಪತ್ನಿ ಶೋಭಾ ಮತ್ತು ಮಗಳಾದ ವರ್ಷ ೨೦೨೨ರ ಡಿಸೆಂಬರ್ ೨೦ರಂದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಇವರ ಕುಟುಂಬಕ್ಕೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಶಾಸಕ ಎಚ್.ಡಿ.ತಮ್ಮಯ್ಯ ಮಂಗಳವಾರ ನಾಲ್ಕು ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದರು.

ಸಂತ್ರಸ್ಥ ಶಿವಕುಮಾರ್ ಅವರು ಮುಖ್ಯಮಂತ್ರಿ ಪರಿಹಾರ ನಿಧಿಗಾಗಿ ೨೦೨೩ರ ಅಕ್ಟೋಬರ್ ೨೭ರಂದು ಅರ್ಜಿ ಸಲ್ಲಿಸಿದ್ದರು. ಆದರೆ ಅವರಿಗೆ ಅಂದಿನ ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಯಾವುದೇ ಹಣ ಬಿಡುಗಡೆ ಆಗಿರಲಿಲ್ಲ. ಮೂರು ವರ್ಷಗಳ ನಂತರ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಪರಿಹಾರ ಬಿಡುಗಡೆ ಮಾಡಲಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.

ಪರಿಹಾರದ ಚೆಕ್ ಅನ್ನು ಶಾಸಕ ಎಚ್.ಡಿ.ತಮ್ಮಯ್ಯ ಅವರು ಸಂತ್ರಸ್ಥರಾದ ಶಿವಕುಮಾರ್ ಹಾಗೂ ಅವರ ಮಗನಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಅಮೀರ್ ಬೆಳವಾಡಿ, ಬಿ.ಎನ್.ನಾಗರಾಜ್, ಹರೀಶ್, ಶಿವಣ್ಣ, ಪರಮೇಶ್ವರಪ್ಪ, ಜಮೀರ್ ಮಾಚೇನಹಳ್ಳಿ, ದೇವರಾಜ್, ಕೃಷ್ಣಮೂರ್ತಿ, ಆನಂದ್, ಕೃಷ್ಣೇಗೌಡ, ಬೊಮ್ಮೇಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net