ಸಂತ್ರಸ್ತೆ ದೂರು ಆಧರಿಸಿ ಚಿಕ್ಕಪ್ಪನ ಬಂಧನ

AREST
Published on

ಚಿತ್ರದುರ್ಗ: ಮುರುಘಾ ಶರಣರ ಮೊದಲ ಪೋಕ್ಸೋ ಪ್ರಕರಣದ ಸಂತ್ರಸ್ತ ಬಾಲಕಿ, ತನ್ನ ಚಿಕ್ಕಪ್ಪನ ವಿರುದ್ಧ ಕೊಟ್ಟಿದ್ದ ದೂರು ಆಧರಿಸಿ, ಆರೋಪಿಯನ್ನು ಬಂಧಿಸಿ, ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಎಸ್‌ಪಿ ಧರ್ಮೇಂದರ್‌ಕುಮಾರ್ ಮೀನಾ ತಿಳಿಸಿದ್ದಾರೆ.
ಮನೆಯಲ್ಲಿ ಚಿಕ್ಕಪ್ಪ ತನಗೆ ಹೊಡೆಯುತ್ತಾರೆ, ನಿಂದಿಸುತ್ತಾ, ದೈಹಿಕ-ಮಾನಸಿಕ ಹಿಂಸೆ ನೀಡಿದ್ದಾರೆ. ನನ್ನ ತಮ್ಮನ ವಿಚಾರದಲ್ಲೂ ಇದೇ ರೀತಿ ನಡೆದುಕೊಳ್ಳುತ್ತಿದ್ದು, ನಮಗೆ ರಕ್ಷಣೆ ಕೊಡಿ ಎಂದು ಕೋರಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಮುಂದೆ ನೊಂದ ಬಾಲಕಿ ಹೇಳಿಕೆ ನೀಡಿದ್ದಳು.
ಈ ಸಂಬಂಧ ವಿಚಾರಣೆ ನಡೆಸಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಬಾಲಕಿಯೊಂದಿಗೆ ಆಪ್ತ ಸಮಾಲೋಚನೆ ನಡೆಸಿತ್ತು. ಬಳಿಕ ಬಾಲಕಿ ಹೇಳಿಕೆ ಆಧರಿಸಿ ಚಿಕ್ಕಪ್ಪನ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಸಮಿತಿ ನಿರ್ದೇಶನ ನೀಡಿತ್ತು. ಸಮಿತಿ ಸೂಚನೆಯಂತೆ ಮಹಿಳಾ ಠಾಣೆ ಪೊಲೀಸರು ಬುಧವಾರ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net