ಸಂತ್ರಸ್ತರಿಗೆ ತೊಂದರೆ ಆಗದಿರಲಿ

2
ಗೋಕಾಕ ನಗರದಲ್ಲಿ ಸ್ಥಾಪಿಸಲಾಗಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದವರಿಗೆ ಶಾಸಕ ರಮೇಶ ಜಾರಕಿಹೊಳಿ ಹೊದಿಕೆ ವಿತರಿಸಿದರು. ಡಾ.ಮೋಹನ ಭಸ್ಮೆ, ಡಿ.ಎಚ್​. ಮುಲ್ಲಾ, ಬಸವರಾಜ ಕುರಿಹೂಲಿ, ರಮೇಶ ಜಾಧವ ಇತರರಿದ್ದರು.
Published on

ಗೋಕಾಕ: ಎಡೆಬಿಡದೆ ಸುರಿಯುತ್ತಿರುವ ಮಹಾಮಳೆಯಿಂದ ಗೋಕಾಕ ನಗರ ಭಾಗಶ@ ಜಲಾವೃತವಾಗಿದ್ದು, ಈಗಾಗಲೇ ಪ್ರವಾಹ ಪರಿಸ್ಥಿತಿಯನ್ನು ತಾಲೂಕಾಡಳಿತ ವತಿಯಿಂದ ಜಾಗರೂಕತೆಯಿಂದ ನಿರ್ವಹಿಸಲಾಗುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದ ನಿರಾಶ್ರಿತರಿಗೆ ಧೈರ್ಯ ಹೇಳುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದ ಗೃಹ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಗರದ ಚಿಕ್ಕೋಳಿ, ಗೋಕಾಕ&ಶಿಂಗಳಾಪುರ ಹೊಸ ಸೇತುವೆ, ಮಟನ್​ ಮಾರ್ಕೆಟ್​, ಕುಂಬಾರ ಓಣಿ, ಲೋಳಸೂರ ಸೇತುವೆ ಹಾಗೂ ನಗರದಲ್ಲಿ ಸ್ಥಾಪಿಸಲಾದ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ವಿತರಿಸುತ್ತಿರುವ ಆಹಾರ, ದಿನಬಳಕೆಯ ವಸ್ತು, ಮೂಲಸೌಕರ್ಯ ಪರಿಶೀಲಿಸಿ ಯಾವುದೆ ತೊಂದರೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಈಗಾಗಲೇ ಸಂತ್ರಸ್ತರಿಗಾಗಿ ನಗರದಲ್ಲಿ 2 ಕಾಳಜಿ ಕೇಂದ್ರ ತೆರೆಯಲಾಗಿದೆ. 200 ಕುಟುಂಬಗಳು ಆಶ್ರಯ ಪಡೆದಿದ್ದು, ತಾಲೂಕಾಡಳಿತದಿಂದ ಉತ್ತಮ ಗುಣಮಟ್ಟದ ಆಹಾರ, ಹೊದಿಕೆ, ದಿನಬಳಕೆ ವಸ್ತು ವಿತರಿಸಲಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸಂತ್ರಸ್ತರ ಆರೋಗ್ಯ ನೋಡಿಕೊಳ್ಳುತ್ತಿದ್ದಾರೆ. ಎರಡು ದಿನಗಳಲ್ಲಿ ಪ್ರವಾಹ ತಗ್ಗುವ ನಿರೀೆಯಿದ್ದು, ಯಾರೂ ಭಯ ಪಡಬಾರದು ಎಂದರು.

ನಗರದಲ್ಲಿ ನಿರ್ಮಿಸಲಾಗಿರುವ ಗೋಕಾಕ&ಶಿಂಗಳಾಪುರ ಹೊಸ ಸೇತುವೆ ಮೇಲೆ ಪ್ರವಾಹ ಆವರಿಸುತ್ತದೆ ಎಂದು ನಾವು ಊಹಿಸಿರಲಿಲ್ಲ. ಆದರೆ,ಶಿಂಗಳಾಪುರ ಭಾಗದಲ್ಲಿ ನೀರು ನುಗ್ಗಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಪ್ರವಾಹ ಕಡಿಮೆಯಾದ ಮೇಲೆ ತುರ್ತಾಗಿ ಸೇತುವೆ ಎತ್ತರಿಸಿ ನೀರು ನುಗ್ಗದಂತೆ ಕ್ರಮ ಕೆಗೊಳ್ಳಲು ಸೂಚಿಸಲಾಗಿದೆ ಎಂದರು.ಗೋಕಾಕ ಭಾಗದ ನಿರಾಶ್ರಿತರಿಗೆ ಶಾಶ್ವತವಾಗಿ ಪುನರ್ವಸತಿ ಕಲ್ಪಿಸಲು ಜಾಗ ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೆಲವರು ಪೂರ್ವಜರ ಮನೆಗಳನ್ನು ಬಿಟ್ಟು ಬರಲು ಹಿಂದೇಟು ಹಾಕುತ್ತಿದ್ದಾರೆ. ಅವರ ಮನವೊಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ತಹಸೀಲ್ದಾರ್​ ಡಾ.ಮೋಹನ ಭಸ್ಮೆ, ಡಿವೈಎಸ್​ಪಿ ಡಿ.ಎಚ್​.ಮುಲ್ಲಾ, ನೋಡಲ್​ ಅಧಿಕಾರಿ ಬಸವರಾಜ ಕುರಿಹುಲಿ, ನಗರಸಭೆ ಪೌರಾಯುಕ್ತ ರಮೇಶ ಜಾಧವ, ಸಿಪಿಐ ಗೋಪಾಲ ರಾಠೋಡ, ಜಿಪಂ ಮಾಜಿ ಸದಸ್ಯ ಟಿ.ಆರ್​.ಕಾಗಲ್​, ಪಿಎಸ್​ಐ ಕೆ.ಬಿ.ವಾಲಿಕಾರ, ಡಾ.ಮೋಹನ ಕಮತ ಸೇರಿ ನಗರಸಭೆ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net