ಸಂತ್ರಸ್ತ ರೈತರ ಅಹವಾಲು ಸ್ವೀಕಾರ

8kolar5-road
ಬೆಂಗಳೂರು * ಚೆನ್ನೆöÊ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕಿ ಅರ್ಚನಾ, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತಿತರರು ಪರಿಶೀಲನೆ ನಡೆಸಿ ರೈತರಿಂದ ಅಹವಾಲು ಸ್ವೀಕರಿಸಿದರು.
Published on

ಕೋಲಾರ: ಬೆಂಗಳೂರು * ಚೆನ್ನೆöÊ ಕಾರಿಡಾರ್ ಎಕ್ಸ್ಪ್ರೆಸ್ ಹೈವೇನಲ್ಲಿ ರೈತರು * ಅಧಿಕಾರಿಗಳ ನಡುವೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ನಿತ್ಯ ಘರ್ಷಣೆಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕಿ ಅರ್ಚನಾ, ಲೋಕೋಪಯೋಗಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಸೇರಿ ಇತರೆ ಅಧಿಕಾರಿಗಳು ಹೊಸಕೋಟೆ ತಾಲೂಕಿನ ಕೊಳತೂರಿನಿಂದ ಮಾಲೂರು ತಾಲೂಕು ಸ್ವಾಮುಲ ಗೊಲ್ಲಹಳ್ಳಿ(ಪಾರ್ಶ್ವಗಾನಹಳ್ಳಿ ಸಮೀಪ) ತನಕ ರಸ್ತೆ ಮಾರ್ಗವಾಗಿ ಸಂಚರಿಸಿ ಪರಿಶೀಲಿಸಿದರು.
ವಿಶೇಷ ಭೂಸ್ವಾಧೀನಾಧಿಕಾರಿ ಮಲ್ಲಿಕಾರ್ಜುನ್, ಜಿಲ್ಲಾಧಿಕಾರಿ ಅಕ್ರಂಪಾಷಾ, ಎಸ್ಪಿ ಎಂ.ನಾರಾಯಣ, ಮಾಲೂರು ತಹಸೀಲ್ದಾರ್ ಕೆ.ರಮೇಶ್ ಸಹ ಉಪಸ್ಥಿತರಿದ್ದು, ಮಾರ್ಗ ಪ್ರಾರಂಭವಾಗುವ ಕೊಳತೂರು ಸೇರಿ ಹೊಸಕೋಟೆ ತಾಲೂಕಿನ ೧೨, ಮಾಲೂರು ತಾಲೂಕಿನ ೨೩ ಮತ್ತು ಕೋಲಾರ ತಾಲೂಕಿನ ೨ ಗ್ರಾಮಗಳ ಜಮೀನುಗಳಿಗೆ ಸಂಬಂಧಿಸಿದಂತೆ ಪರಿಹಾರ ವಿತರಣೆ, ಭೂಸ್ವಾಧೀನಕ್ಕೆ ಎದುರಾಗಿರುವ ಸಮಸ್ಯೆಗಳು ಮತ್ತು ಮಾರ್ಗದ ಪ್ರಗತಿ ಕುರಿತು ಕೂಲಂಕುಷ ಪರಿಶೀಲನೆ ನಡೆಸಲಾಯಿತು.
ರೈತರಿಂದ ಅಹವಾಲು: ಪಿ.ನಂಬರ್ ದುರಸ್ತಿ ಸೇರಿ ನಾನಾ ಕಾರಣದಿಂದ ಪರಿಹಾರ ಸಿಗದೆ ತೊಂದರೆಗೊಳಗಾಗಿರುವ ರೈತರ ಸಮಸ್ಯೆಗಳನ್ನು ಅಧಿಕಾರಿಗಳ ತಂಡ ಆಲಿಸಿದ್ದು, ತ್ವರಿತ ಇತ್ಯರ್ಥಕ್ಕೆ ಹಿರಿಯ ಅಧಿಕಾರಿಗಳು ಜಿಲ್ಲಾಡಳಿತ ಮತ್ತು ಭೂಸ್ವಾಧೀನ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇನ್ನು ರೈತರ ಪಿ.ನಂಬರ್ ದುರಸ್ತಿಗೆ ಆ.೯, ಕೋಲಾರದಲ್ಲಿ ೧೧ಕ್ಕೆ ಉಪವಿಭಾಗಾಧಿಕಾರಿ, ತಹಸೀಲ್ದಾರ್, ಕಂದಾಯ ಅಧಿಕಾರಿ, ಗ್ರಾಮಲೆಕ್ಕಿಗರು ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದು, ದಾಖಲೆಗಳನ್ನು ಸರಿಪಡಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ತಿಳಿಸಿದ್ದಾರೆ.
ರೈತರು ವಿಷಸೇವಿಸಿದ್ದರು: ಭೂಸ್ವಾಧೀನಾಧಿಕಾರಿಗಳು ಸೂಕ್ತ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಸ್ವಾಮುಲ ಗೊಲ್ಲಹಳ್ಳಿ ಬಳಿ ಜಮೀನು ಹೊಂದಿರುವ ಅಭಿಗೌಡ, ಕೃಷ್ಣಮೂರ್ತಿ ಇತ್ತೀಚೆಗೆ ವಿಷ ಸೇವಿಸಿ ಎಸ್ಸೆನ್ನಾರ್ ಜಿಲ್ಲಾಸ್ಪತ್ರೆ ಪಾಲಾಗಿದ್ದನ್ನು ಸ್ಮರಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net