

ಸಂಡೂರು: ಸುಲ್ತಾನಪುರ ಗ್ರಾಮದಲ್ಲಿರುವ ಜಿಂದಾಲ್ ಕೈಗಾರಿಕಾ ಕೇಂದ್ರದ ಬೂದಿದಿಬ್ಬ 2022ರ ಏ.22ರಂದು ಕುಸಿದು ಮೃತಪಟ್ಟಿದ್ದ ಕಾರ್ಮಿಕರಾದ ಯು.ರಾಜಾಪುರ ಗ್ರಾಮದ ಹೊನ್ನೂರುಸ್ವಾಮಿ ಹಾಗೂ ತುಮಟಿ ಗ್ರಾಮದ ರಾಮಾಂಜನೇಯ ಕುಟುಂಬಕ್ಕೆ ಇದುವರೆಗೆ ಕಂಪನಿ ಹಾಗೂ ಸರ್ಕಾರ ಪರಿಹಾರ ನೀಡಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ವಿ.ಎಸ್.ಶಿವಶಂಕರ್ ದೂರಿದರು.
ದುಡಿಯುವರನ್ನೇ ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಪರಿಹಾರ ನೀಡದಿದ್ದಲ್ಲಿ ಜು.2ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಲಾಗುವುದು. ಅವಘಡಕ್ಕೆ ಕಾರಣರಾದ ಗುತ್ತಿಗೆದಾರ ಹಾಗೂ ಕೈಗಾರಿಕಾ ಇಲಾಖೆ ಅಧಿಕಾರಿಗಳನ್ನು ಬಂಧಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಲಾಗುವುದು ಎಂದರು.