

ಹಾಸನ: ಜಿಲ್ಲಾ ರೆಡ್ ಕ್ರಾಸ್ ಘಟಕ ಮತ್ತು ಆಲೂರು ತಾಲೂಕು ರೆಡ್ ಕ್ರಾಸ್ ಘಟಕದ ಸಹಯೋಗದೊಂದಿಗೆ ತಾಲೂಕಿನಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಮನೆಗಳ ಕುಟುಂಬಗಳಿಗೆ ಪರಿಹಾರವಾಗಿ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಲಾಯಿತು.
ಆಲೂರು ತಹಸೀಲ್ದಾರ್ ಕಚೇರಿಯಿಂದ ಪೂರ್ಣ ಅಧಿಕೃತ ಮತ್ತು ಅನಧಿಕೃತ ಹಾನಿಗೊಳಗಾಗಿ ಕಷ್ಟದಲ್ಲಿರುವ ಮನೆಗಳನ್ನು ಅಯ್ಕೆ ಮಾಡಿಕೊಂಡು ತಾತ್ಕಾಲಿಕ ಪರಿಹಾರ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವನ್ನು ಸೋಮವಾರ ಜಿಲ್ಲಾ ರೆಡ್ ಕ್ರಾಸ್ ಘಟಕದ ಸಭಾಪತಿ ಹೆಮ್ಮಿಗೆ ಮೋಹನ್ ಅವರ ನೇತೃತ್ವದಲ್ಲಿ ತಾಲೂಕಿನ ಕಸಬಾ ಹೋಬಳಿ, ಪಾಳ್ಯ, ಕೆ.ಹೊಸಕೋಟೆ ಹೋಬಳಿಗಳ ಒಟ್ಟು 10 ಬಡಕುಟುಂಬಗಳ ಮನೆಗಳ ಬಳಿ ಹೋಗಿ ಗ್ರಾಮಸ್ಥರ ಸಮ್ಮುಖದಲ್ಲಿ ಸಾಮಾಗ್ರಿಗಳನ್ನು ವಿತರಿಸಲಾಯಿತು.
ಕುಟುಂಬಗಳಿಗೆ ಪರಿಹಾರವಾಗಿ ಆಹಾರ ಸಾಮಾಗ್ರಿಗಳ ಕಿಟ್, ಒಂದು ದೊಡ್ಡ ಟಾರ್ಪಲ್. ಕುಟುಂಬಕ್ಕೆ ಅಡುಗೆ ಮಾಡಿಕೊಳ್ಳುವಷ್ಟು ಪಾತ್ರೆಗಳು, ಹಾಸಿಗೆ, ಹೊದಿಕೆ, ಸೊಪು, ಟೆವಲ್ ,ಪೇಸ್ಟ್, ಬ್ರೆಶ್‌ಗಳು , ಅಗತ್ಯ ವಸ್ತುಗಳನ್ನ ವಿತರಿಸಲಾಯಿತು.ಹೀಗೆ ಉಳಿದ ತಾಲೂಕುಗಳಿಗೂ ರೆಡ್ ಕ್ರಾಸ್ ತಂಡ ಬೇಟಿ ನೀಡಿ ಪೂರ್ಣ ಹಾನಿಯಾಗಿರುವ ಮನೆಗಳನ್ನು ಗುರುತಿಸಿ ಅವರಿಗೆ ಮುಂದಿನ ಎರಡು ವಾರಗಳಲ್ಲಿ ಸಾಮಾಗ್ರಿಗಳನ್ನು ವಿತರಿಸಲಾಗುವುದು ಎಂದು ಸಭಾಪತಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಕಾರ್ಯದರ್ಶಿ ಶಬೀರ್ ಅಹಮದ್, ಖಜಾಂಜಿ ಎಚ್.ಡಿ ಜಯೇಂದ್ರ ಕುಮಾರ್, ನಿರ್ದೇಶಕರಾದ ಎಚ್.ಡಿ ಕುಮಾರ್, ಅಮ್ಜದ್ ಖಾನ್, ಬಿ.ಆರ್ ಉದಯ ಕುಮಾರ್, ಆಲೂರು ತಾಲೂಕು ಘಟಕದ ಸಭಾಪತಿ ಕಾಂತರಾಜ್, ಕಾರ್ಯದರ್ಶಿ ವೀರಭದ್ರಸ್ವಾಮಿ, ನಿರ್ದೇಶಕ ರಘು, ಡಿಸೋಜ್ ಜಿಲ್ಲಾ ಸಂಚಾಲಕ ಹರ್ಷಿತ್ ಮತ್ತು ಮತ್ತಿತ್ತರರು ಇದ್ದರು.