

ಬೀದರ್: ಬೆನಕನಳ್ಳಿ ಹತ್ತಿರ ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ಚಿಮಕೋಡ್ ಗ್ರಾಮದ ಈಶ್ವರ ಹಂದೆ ಪರಿವಾರಕ್ಕೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ನೆರವು ನೀಡಿದ್ದಾರೆ.
ಅವರ ಮನೆಗೆ ಭೇಟಿ ನೀಡಿ ಪಾಲಕರನ್ನು ಸಾಂತ್ವನ ಹೇಳಿದ ನಾಗಮಾರಪಳ್ಳಿ ವೈಯುಕ್ತಿಕವಾಗಿ ಆರ್ಥಿಕ ನೆರವು ನೀಡಿದರು. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲು ಶ್ರಮಿಸುವುದಾಗಿ ಭರವಸೆ ನೀಡಿದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಜೇಂದ್ರ ಪೂಜಾರಿ, ಗ್ರಾಮದ ಪ್ರಮುಖರಾದ ವೆಂಕಟರಾವ್ ಬಿರಾದಾರ್, ನಾಗಶೆಟ್ಟಿ ಪಾಟೀಲ್, ಮಹಾದೇವ ಪಾಟೀಲ್, ರವಿ ಚಿನ್ನಪ್ಪನೋರ್, ಸಂಜುಕುಮಾರ ಟೊಳ್ಳೆ, ರಾಜೇಂದ್ರ ಪೂಜಾರಿ, ಫರ್ನಾಂಡಿಸ್ ಹಿಪ್ಪಳಗಾಂವ್, ಸಂತೋಷ, ಸಚಿನ್ ಪಾಟೀಲ್, ಪ್ರಸಾದ ಪಾಟೀಲ್, ಶ್ರೀಧರ ಬಿರಾದಾರ್, ರಾಜಕುಮಾರ ಪಸರ್ಗೆ, ಮಲ್ಲಿಕಾರ್ಜುನ ಮರಕಲೆ ಮುಂತಾದವರು ಉಪಸ್ಥಿತರಿದ್ದರು.