ಸಂತೆಶಿವರದಲ್ಲಿ ಶ್ರೀಗಂಗಾಧರೇಶ್ವರಸ್ವಾಮಿ ಬ್ರಹ್ಮರಥೋತ್ಸವ

Published on

ನುಗ್ಗೇಹಳ್ಳಿ: ಸಂತೆಶಿವರ ಗ್ರಾಮದ ಪುರಾಣ ಪ್ರಸಿದ್ಧ ಶ್ರೀಗಂಗಾಧರೇಶ್ವರಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನೆರವೇರಿತು.


ರಾತ್ರಿ ಕುದುರೆ ಉತ್ಸವ, ಕಲ್ಯಾಣೋತ್ಸವ, ಬೆಳಗ್ಗೆ ಕೃಷ್ಣಗಂಧೋತ್ಸವ, ಪಡಿಸೇವೆ, ರಥಕ್ಕೆ ಮಹಾನೈವೇದ್ಯ, ಹೂವಿನ ಅಲಂಕಾರದೊಂದಿಗೆ ಶ್ರೀರಾಮ ನವಮಿಯ ಶುಭದಿನದಂದು ರಥೋತ್ಸವ ನೆರವೇರಿತು.


ಸಂತೆಶಿವರ ಗ್ರಾಮದ ಸುತ್ತಲಿನ ಗಂಗೇನಹಳ್ಳಿ, ಗಂಜಿಗೆರೆ, ಹೊಸಳ್ಳಿ, ದುಗ್ಗೇನಹಳ್ಳಿ, ಯಾಚನಘಟ್ಟದ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಪೂಜೆ ಸಲ್ಲಿಸಿ ರಥಕ್ಕೆ ದವನ-ಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ರಥೋತ್ಸವದಲ್ಲಿ ಭಾಗವಹಿಸಿದ್ದ ಭಕ್ತರಿಗೆ ಅನ್ನದಾಸೋಹ ಪ್ರಸಾದ ವಿತರಿಸಲಾಯಿತು.


ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಎನ್.ಲೋಕೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಟೇಲ್ ಗಂಗೇಗೌಡ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗರತ್ನ, ಗ್ರಾಮ ಪಂಚಾಯಿತಿ ಸದಸ್ಯರಾದ ಮಧು ಪಟೇಲ್, ನಿಂಗಮ್ಮ, ಮುಖಂಡರಾದ ಕೃಷ್ಣಪ್ರಸಾದ್, ಅನಂತರಾಮ್, ಸಾವಯವ ಕೃಷಿಕ ಬಸವರಾಜ್, ಗುಡಿ ಗೌಡ ಚಿರಂಜೀವಿ, ರವಿ, ಹೇಮಂತ್, ರಾಜು, ಎಸ್.ಎಸ್.ದಿಲೀಪ್, ಎಸ್.ಮಂಜುನಾಥ್, ಧನಂಜಯ, ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net