ಸಂತಾನ ಶಸ್ತ್ರ ಚಿಕಿತ್ಸೆ ವಿಫಲ,ವೈದ್ಯರಿಗೆ ದಂಡ

Penalty Fine
Published on

ಚಿತ್ರದುರ್ಗ: ಮಹಿಳೆಯೊಬ್ಬರಿಗೆ ಕೈಗೊಂಡಿದ್ದ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ವಿಫಲವಾಗಿದ್ದಕ್ಕೆ,ಜಿಲ್ಲಾಸ್ಪತ್ರೆ ಹಿರಿಯ ಪ್ರಸೂತಿ ತಜ್ಞ ಡಾ.ಕೆ.ಶಿವಕುಮಾ ರ್ ಹಾಗೂ ಜಿಲ್ಲಾಸ್ಪತ್ರೆ ಮೇಲಧಿಕಾರಿಗಳ ಸೇವಾ ನಿರ್ಲಕ್ಷೃಕ್ಕಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿ ಗುರುವಾ ರ ಆದೇಶಿಸಿದೆ. 2014 ಏಪ್ರಿಲ್ 28ರಂದು ಮಹಿಳೆಗೆ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ವಿಫಲವಾಗಿದ್ದರಿಂದ,ಮಹಿಳೆ 3ನೇ ಮಗುವಿಗೆ 2020 ಜನವರಿ 26ರಂದು ಜನ್ಮ ನೀಡಿದ್ದಳು.

ವೈದ್ಯರ ನಿರ್ಲಕ್ಷೃದಿಂದಾಗಿ ಮೂರನೇ ಮಗು ಜನಿಸಿದೆ ಎಂದು ದೂರುದಾರರು,ವೈದ್ಯಕೀಯ ಸೇವಾ ನಿರ್ಲಕ್ಷೃಕ್ಕೆ ಪರಿಹಾರ ಕೋರಿ ಆ ಯೋಗಕ್ಕೆ 2021 ಫೆ.17ರಂದು ದೂರು ದಾಖಲಿಸಿದ್ದರು. ವಿಚಾರಣೆ ನಡೆಸಿದ್ದ ಆಯೋಗ ಶಸ್ತ್ರ ಚಿಕಿತ್ಸೆ ಫಲಕಾರಿಯಾಗದಿರುವುದಕ್ಕೆ ಪರಿಹಾ ರವಾಗಿ 30 ಸಾವಿರ ರೂ.,ದೈಹಿಕ,ಮಾನಸಿಕ ಹಿಂಸೆ ದೂರು ಖರ್ಚಿಗೆ 25 ಸಾವಿರ ರೂ.ಸಹಿತ 55 ಸಾವಿರ ರೂ.ಗಳನ್ನು 30 ದಿನದೊಳಗೆ ಪಾ ವತಿಸಬೇಕೆಂದು ಆಯೋಗ ಅಧ್ಯಕ್ಷೆ ಎಚ್. ಎನ್.ಮೀನಾ ಹಾಗೂ ಸದಸ್ಯೆ ಬಿ.ಎಚ್.ಯಶೋಧ ಆದೇಶಿಸಿದ್ದಾರೆ.

----

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net